ಮಾಜಿ ಆಪ್ತ ಸಹಾಯಕ ಪಂಪ್ಪಣ್ಣ ಫ್ಲಾಟಿನಲ್ಲೂ ಇಡಿ ಅಧಿಕಾರಿಗಳು ತಲಾಷ್..

K 2 Kannada News
ಮಾಜಿ ಆಪ್ತ ಸಹಾಯಕ ಪಂಪ್ಪಣ್ಣ ಫ್ಲಾಟಿನಲ್ಲೂ ಇಡಿ ಅಧಿಕಾರಿಗಳು ತಲಾಷ್..
WhatsApp Group Join Now
Telegram Group Join Now

K2kannadanews.in

ED attack ರಾಯಚೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ, ನಗರದಲ್ಲಿ ಬೆಳಗಿನಿಂದಲೇ ಇಡಿ ಅಧಿಕಾರಿಗಳು ಎರಡು ಕಡೆ ದಾಳಿ ನಡೆಸಿ ತನಿಖೆ ಮಾಡುತ್ತಿದ್ದಾರೆ. ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ಮತ್ತು ಮಾಜಿ ಆಪ್ತ ಸಹಾಯಕ ಪಂಪ್ಪಣ್ಣ ವಾಸಿಸುತ್ತಿರುವ ಫ್ಲ್ಯಾಟ್ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.

ಕಳೆದ ಸುಮಾರು 12 ಗಂಟೆಗಳಿಂದ ಇಡಿ ಅಧಿಕಾರಿಗಳು ಬಸನಗೌಡ ದದ್ದಲ್ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಮನೆಯಲ್ಲಿ ಇಂಚಿಂಚು ಶೋಧಕಾರ್ಯ ನಡೆಸಿರೋ ಅಧಿಕಾರಿಗಳು ಅವರ ಕಾರುಗಳನ್ನು ಬಿಡದೆ ಶೋಧಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಮಾಜಿ ಆಪ್ತ ಸಹಾಯಕ ಉಳಿದುಕೊಂಡಿರುವ ಫ್ಲ್ಯಾಟ್ ಮೇಲಿಯೂ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಈ ಪ್ರಕರಣದಲ್ಲಿ ಹಣ ಪಡೆದಿರುವ ಆರೋಪ ಆಧರಿಸಿ ಮಾಜಿ ಆಪ್ತ ಸಹಾಯಕ ಪಂಪ್ಪಣ್ಣರನ್ನು ವಿಚಾರಣೆ ನಡೆಸುತ್ತಿದ್ದಾರೆ‌. ಇಡಿ ಅಧಿಕಾರಿಗಳು ಪಂಪಣ್ಣರನ್ನು ಕರೆಯಿಸಿ ವಿಚಾರಣೆ ನಡೆಸಿದ್ದು, ಆತನ ಎದುರಲ್ಲೇ ದಾಖಲೆಗಳ ಪರಿಶೀಲನೆ ನಡೆದಿದೆ. ಅಪಾರ್ಟ್ ಮೆಂಟ್ ನಲ್ಲಿರೋ 104 ಫ್ಲಾಟ್ ನಲ್ಲಿ ಇಡಿ ಅಧಿಕಾರಿಗಳ ಶೋಧ ಕಾರ್ಯ ನಡೆಸಿದ್ದಾರೆ.

WhatsApp Group Join Now
Telegram Group Join Now
Share This Article