K2kannadanews.in
Health Tips ಆರೋಗ್ಯ ಭಾಗ್ಯ : ಇತ್ತೀಚಿನ ನಮ್ಮ ಒತ್ತಡದ ಬದುಕಿನಲ್ಲಿ ನಮ್ಮ ಆರೋಗ್ಯದ ಬಗ್ಗೆ ಗಮನಹರಿಸುತ್ತಿಲ್ಲ. ನಾವು ಸೇವನೆ ಮಾಡುವ ಕೆಲವು ಆಹಾರಗಳು, ಹಣ್ಣುಗಳು ಹಾಗೂ ತರಕಾರಿಗಳು ದೇಹದ ತೂಕ ಇಳಿಸಲು ತುಂಬಾ ಸಹಕಾರಿ ಆಗಿರುವುದು. ಅದರಲ್ಲಿ ಒಂದು ಕೆಂಪು ಬಾಳೆಹಣ್ಣು. ಇದನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯವೂ ಸೇವನೆ ಮಾಡಿದರೆ, ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶಗಳು ಮತ್ತು ಖಂಡಿತವಾಗಿಯೂ ತೂಕ ಇಳಿಸಬಹುದು.
ಕೆಂಪು ಬಾಳೆ ಹಣ್ಣಿನಲ್ಲಿ ಕ್ಯಾಲರಿ 90 ಕೆಸಿಎಎಲ್, ಪ್ರೋಟೀನ್ 1.1 ಗ್ರಾಂ, ಕೊಬ್ಬು 0.3 ಗ್ರಾಂ, ಕಾರ್ಬೋಹೈಡ್ರೇಟ್ಸ್ 22.8 ಗ್ರಾಂ, ಪೊಟಾಶಿಯಂ 250 ಮಿ.ಗ್ರಾಂ, ಪೋಸ್ಪರಸ್ 22 ಮಿ.ಗ್ರಾಂ., ನಾರಿನಾಂಶ 2.6 ಮಿ.ಗ್ರಾಂ, ವಿಟಮಿನ್ ಬಿ9 2.6 ಮಿ.ಗ್ರಾಂ. ಕ್ಯಾಲ್ಸಿಯಂ 5 ಮಿ.ಗ್ರಾಂ, ಕ್ಯಾಲ್ಸಿಯಂ 5 ಮಿ.ಗ್ರಾಂ., ಸೋಡಿಯಂ 1.3 ಮಿ.ಗ್ರಾಂ. ವಿಟಮಿನ್ ಸಿ 5 ಮಿ.ಗ್ರಾಂ. ಇದೆ. ರಕ್ತದೊತ್ತಡ ಮತ್ತು ಮಧುಮೇಹ ನಿರ್ವಹಣೆಯ ಜತೆಗೆ ಇದು ಸಂಪೂರ್ಣ ಆರೋಗ್ಯ ಕಾಪಾಡುವುದು. ಕೆಂಪು ಬಾಳೆಹಣ್ಣಿನಲ್ಲಿ ಇರುವ ಪೋಷಕಾಂಶ ಮೌಲ್ಯಗಳು ಮತ್ತು ಅದರ ಆರು ಲಾಭಗಳು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಾಳೆಹಣ್ಣಿನ ವಿಧಗಳು ಇವೆ ಎಂದು ಹೇಳಲಾಗುತ್ತದೆ.
ಕೆಂಪು ಬಾಳೆಹಣ್ಣು ಕೂಡ ಇದರಲ್ಲಿ ಒಂದು ಆಗ್ನೇಯ ಏಶ್ಯಾದಲ್ಲಿ ಬೆಳೆಯುವ ಇದು ರಸ್ಬೇರಿಯ ರುಚಿಯನ್ನು ಹೊಂದಿದೆ. ಜೀರ್ಣಕ್ರಿಯೆಯನ್ನು ಸುಧಾರಣೆ ಮಾಡುವ ಇದು ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ. ಹೆಚ್ಚಿನ ಪೋಷಕಾಂಶಗಳನ್ನು ದೇಹಕ್ಕೆ ನೀಡುವ ಒಂದು ಶಕ್ತಿಯನ್ನು ಈ ಒಂದು ಕೆಂಪು ಬಾಳೆಹಣ್ಣು ಹೊಂದಿದೆ. ಇದು ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ, ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ, ಮಕ್ಕಳಲ್ಲಿ ಶಕ್ತಿ ಹೆಚ್ಚಿಸುತ್ತದೆ, ತೂಕ ತಿಳಿಸಲು ನೆರವಾಗುತ್ತದೆ, ಮನಸ್ಥಿತಿ ಸುಧಾರಿಸುವುದು, ದೀರ್ಘಾವಧಿ ಕಾಯಿಲೆ ತಡೆಯುವುದು.
ಹಾಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದು ಮತ್ತು 11 ಖನಿಜಾಂಶಗಳು, 6 ವಿಟಮಿನ್ ಗಳು ಮತ್ತು ಕಾರ್ಬೋಹೈಡ್ರೇಟ್ಸ್ ಗಳು ಇವೆ. ಇದು ಆರೋಗ್ಯ ರಕ್ಷಣೆಗೆ ಸಹಕಾರಿ.