K2kannadanews.in
Crime News ಸಿರವಾರ : ಟಾಟಾ ಏಸ್ (Tata eace vehicle) ವಾಹನ ಮತ್ತು ರಾಜಹಂಸ ಬಸ್ (bus) ನಡುವೆ ಮುಖಾಮುಖಿ ಡಿಕ್ಕಿಯಾಗಿ (collision) ಚಾಲಕ (Driver) ಗಂಭೀರವಾಗಿ ಗಾಯಗೊಂಡ ಘಟನೆ ಅತ್ತನೂರು ಗ್ರಾಮದ ಬಳಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಅತನೂರು ಗ್ರಾಮದ ಬಳಿ ಈ ಒಂದು ಭೀಕರ ಅಪಘಾತ (Accident) ಜರುಗಿದೆ. ಲಿಂಗಸುಗೂರಿನಿಂದ (Lingasuguru) ರಾಯಚೂರು ಕಡೆಗೆ ಹೊರಟಿದ್ದ ಸಾರಿಗೆ ಬಸ್ ಹಾಗೂ ರಾಯಚೂರಿನಿಂದ ಅತ್ತನೂರು ಗ್ರಾಮಕ್ಕೆ ಹೊರಟಿದ್ದ ಟಾಟಾ ಏಸ್ ವಾಹನಗಳು ಮುಖಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ಪರಿಣಾಮವಾಗಿ ಟಾಟಾ ಏಸ್ ವಾಹನ ಇಬ್ಭಾಗವಾಗಿದೆ. ಟಾಟಾ ಎಸ್ ವಾಹನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅತ್ತನೂರು ಅತ್ತನೂರು ಗ್ರಾಮದ ಸಮೀರ್ (21) ಎಂದು ಗುರುತಿಸಿಲಾಗಿದೆ.
ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿರವಾರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತವಾದ ಕೆಲಕಾಲ ರಾಜ್ಯ ಹೆದ್ದಾರಿ ಆಗಿದ್ದರಿಂದ ಕೆಲಕಲ್ಲ ಟ್ರಾಫಿಕ್ ಜಾಮ್ ಉಂಟಾಗಿತ್ತು.