K2kannadanews.in
Crime news ಚನ್ನೈ : ಕಂಡಕ್ಟರ್ ಮೇಲಿನ ಸೇಡು ತೀರಿಸಿಕೊಳ್ಳಲು ಕುಡುಕನೊಬ್ಬ ಖಾಲಿ ಬಸ್ಸನ್ನೇ ಅಪಹರಿಸಿದ ಘಟನೆಯೊಂದು ಚನ್ನೈನಲ್ಲಿ ನಡೆದಿದೆ.
ಹೌದು ತಮಿಳುನಾಡಿನಲ್ಲಿ ವಿಲಕ್ಷಣ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ಚೆನ್ನೈ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಬಸ್ಸ್ ಅಪಹರಿಸಿ ಸಿಕ್ಕಿಬಿದ್ದಿದ್ದಾನೆ. ವಿಚಾರಣೆಯ ವೇಳೆ ಕೆಲವು ದಿನಗಳ ಹಿಂದೆ ತನ್ನ ಜೊತೆ ಬಸ್ ಕಂಡಕ್ಟರ್ ಜೊತೆ ಜಗಳವಾಗಿತ್ತು. ಹಾಗಾಗಿ ಸೇಡು ತೀರಿಸಿಕೊಳ್ಳಲು ಖಾಲಿ ಬಸ್ ಅಪಹರಿಸಿರುವುದಾಗಿ ಅಬ್ರಹಾಂ ಬಹಿರಂಗಪಡಿಸಿದ್ದಾನೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ತಿರುವನ್ಮಿಯೂರ್ ಬಸ್ ಟರ್ಮಿನಲ್‌ನಿಂದ ಬ್ರಾಡ್‌ವೇಯಿಂದ ಕೋವಲಂಗೆ ಚಲಿಸುತ್ತಿದ್ದ ಬಸ್ಸನ್ನು ಅಬ್ರಹಾಂ ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ಈ ವೇಳೆ ಆ ಬಸ್ ಖಾಲಿಯಾಗಿತ್ತು. ಬಸ್ ಅನ್ನು ಹೈಜಾಕ್ ಮಾಡಿ ಬೇರೆಡೆ ತೆಗೆದುಕೊಂಡು ಹೋದ ಕುಡುಕ ಆ ಬಸ್ ಅನ್ನು ಡಿಕ್ಕಿ ಹೊಡೆಸಿದ್ದಾನೆ. ತಿರುವನ್ಮಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.