ಪೂಜೆಗೆ ಬಳಸಿದ ದಾಸವಾಳ ಎಸೆಯಬೇಡಿ : ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು..

K 2 Kannada News
ಪೂಜೆಗೆ ಬಳಸಿದ ದಾಸವಾಳ ಎಸೆಯಬೇಡಿ : ಅಂದ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು..
Oplus_131072
WhatsApp Group Join Now
Telegram Group Join Now

K2kannadanews.in

Health tips ಆರೋಗ್ಯ ಭಾಗ್ಯ : ದಾಸವಾಳ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹಿಂದೂ ಸಂಪ್ರದಾಯದಲ್ಲಿ ಪ್ರತಿನಿತ್ಯ ದೇವರ ಪೂಜೆಗೆ ಬಳಸುತ್ತೇವೆ. ಆದ್ರೆ ದೇವರಿಗೆ ಬಳಸಿದ ನಂತರ ಹೂ ಬಿಸಾಡುತ್ತೇವೆ. ದಾಸವಾಳದ ಹೂವಿನಿಂದ ಅಂದ ಹಾಗೂ ಆರೋಗ್ಯವನ್ನು ಹೇಗೆಲ್ಲಾ ಕಾಪಾಡಿಕೊಳ್ಳಬಹುದು ಅಂತ ಗೊತ್ತಾದ್ರೆ ನೀವೆ ಬಿಸಾಡಲ್ಲ..

ದಾಸವಾಳದ ಭಾಗಗಳನ್ನು ವಿವಿಧ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಅವುಗಳಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ತಾಮ್ರ, ಮೆಗ್ನೀಸಿಯಮ್, ಕಬ್ಬಿಣ, ಸತು, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 6, ವಿಟಮಿನ್ ಕೆ ಮುಂತಾದ ಪೋಷಕಾಂಶಗಳಿವೆ. ದಾಸವಾಳದ ಹೂವುಗಳು ಆಂಟಿಮೈಕ್ರೊಬಿಯಲ್, ಆಂಟಿ-ಜೆನೊಟಾಕ್ಸಿಕ್, ಮಧುಮೇಹ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಇದು ಚರ್ಮವನ್ನು ರಕ್ಷಿಸುತ್ತದೆ. ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ. ದಾಸವಾಳದ ಹೂ ಹಾಗೂ ಎಲೆಗಳನ್ನು ಹಿಂದಿನ ಕಾಲದಿಂದಲೂ ಔಷಧ ರೂಪದಲ್ಲಿ ಬಳಸಲಾಗುತ್ತಿತ್ತು. ಹಾಗಾದರೆ ದಾಸವಾಳದ ಮರುಬಳಕೆ ಹೇಗೆ ನೋಡಿ.

ಕೂದಲಿನ ಆರೋಗ್ಯ : ಕೂದಲು ಮೃದುವಾಗಿ ಮತ್ತು ಸದಾ ಹೊಳೆಯುತ್ತಿರಬೇಕು ಅಂದ್ರೆ ದಾಸವಾಳದ ಹೂವಿನಿಂದ ಪೇಸ್ಟ್‌ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಿ. ಇದು ಕೂದಲನ್ನು ರೇಷ್ಮೆಯಂತೆ ಮೃದುವಾಗಿಸುತ್ತದೆ. ದಾಸವಾಳದ ಹೂವಿನ ಹೇರ್‌ಮಾಸ್ಕ್‌ ತಯಾರಿಸಲು, ಹೂವುಗಳಿಂದ ಪೇಸ್ಟ್ ತಯಾರಿಸಿ. ಆ ಪೇಸ್ಟ್‌ನಲ್ಲಿ ಮೊಸರು ಮತ್ತು ನೆಲ್ಲಿಕಾಯಿ ಪೌಡರ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೇರುಗಳು ಗಟ್ಟಿಯಾಗುತ್ತವೆ.

ದಾಸವಾಳ ಚಹಾ : ದಾಸವಾಳದಿಂದ ತಯಾರಿಸಿದ ಚಹಾವು ಅನೇಕ ರೋಗಗಳನ್ನು ಗುಣಪಡಿಸುತ್ತದೆ. ದೇವರಿಗೆ ಬಳಸಿದ ದಾಸವಾಳದ ಹೂಗಳನ್ನು ಒಣಗಿಸಿ ಸಂಗ್ರಹಿಸಿ, ಅದನ್ನು ಪುಡಿ ಮಾಡಿಟ್ಟುಕೊಳ್ಳಿ. ದಿನಕ್ಕೊಮ್ಮೆ ಈ ಪುಡಿಯಿಂದ ಟೀ ಮಾಡಿದರೆ ತುಂಬಾ ಒಳ್ಳೆಯದು. ದೇಹವನ್ನು ತಂಪಾಗಿಡಲು, ಹೊಟ್ಟೆಯಲ್ಲಿ ಕಿರಿಕಿರಿಯನ್ನು ತಡೆಯಲು, ರಕ್ತ ಪರಿಚಲನೆ ತೊಂದರೆಗಳನ್ನು ತಡೆಗಟ್ಟಲು ಮತ್ತು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಇದು ತುಂಬಾ ಉಪಯುಕ್ತವಾಗಿದೆ.

ಫೇಸ್‌ಮಾಸ್ಕ್ : ದಾಸವಾಳದ ಹೂವುಗಳಿಂದ ಫೇಸ್ ಮಾಸ್ಕ್ ತಯಾರಿಸಬಹುದು. ದಾಸವಾಳದ ಹೂವನ್ನು ಜೇನುತುಪ್ಪ, ಅಥವಾ ಮೊಸರಿದೊಂದಿಗೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ಚರ್ಮದ ಮೇಲೆ ಶುಷ್ಕತೆ ಮತ್ತು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದಾಸವಾಳದ ಹೂಗಳನ್ನು ಒಣಗಿಸಿ ಪುಡಿ ಮಾಡಿ, ಇದನ್ನು ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ. ಅದರಿಂದ ನಿಮಗೆ ಬೇಕಾದಾಗ ಫೇಸ್‌ಮಾಸ್ಕ್ ತಯಾರಿಸಿ ಬಳಸಬಹುದು.

ದಾಸವಾಳವು ಹೆಚ್ಚು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದರಿಂದ ಸುಟ್ಟಗಾಯಗಳು ಬೇಗನೆ ಗುಣವಾಗುತ್ತವೆ. ಚರ್ಮದಲ್ಲಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರಿಂದ ತ್ವಚೆಯು ನವತಾರುಣ್ಯದಲ್ಲಿ ಇದ್ದಂತೆ ಕಾಣುತ್ತದೆ. ಇದು ನೈಸರ್ಗಿಕವಾಗಿ ತ್ವಚೆ ಹೊಳಪನ್ನು ಹೆಚ್ಚಿಸುತ್ತದೆ.

ದಾಸವಾಳದ ಹೂವುಗಳಿಂದ ಈ ಎಲ್ಲಾ ಪ್ರಯೋಜನಗಳು ಇರುವ ಕಾರಣ ಪೂಜೆ ಬಳಸಿದ ದಾಸವಾಳವನ್ನು ಎಸೆಯಬೇಡಿ. ಇದರಿಂದ ಇದನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದರಿಂದ ಮೇಲೆ ಹೇಳಿದಂತೆ ಬಳಸಿ ಅಂದ, ಆರೋಗ್ಯ ಹಾಗೂ ಕೂದಲಿನ ರಕ್ಷಣೆಯನ್ನು ಮಾಡಿಕೊಳ್ಳಬಹುದು. ಆದರೆ ಕೊಳೆತ ಹೂವಿನ ಬಳಕೆ ಉತ್ತಮವಲ್ಲ, ನೆನಪಿರಲಿ.

WhatsApp Group Join Now
Telegram Group Join Now
Share This Article