This is the title of the web page
This is the title of the web page
Politics News

ಬಿಜೆಪಿ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ : ಸಿಎಂ ಬೊಮ್ಮಾಯಿ


K2 ಪೊಲಿಟಿಕಲ್ ನ್ಯೂಸ್ : : ಕಾಂಗ್ರೆಸ್ ನವರು ಬಿಜೆಪಿಯವರನ್ನು ಕರೆದುಕೊಂಡಿರಬಹುದು.ಆದರೆ ಬಿಜೆಪಿಯ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದರು. ಶೆಟ್ಟರ್ ಅವರು ಮಾಡಿರುವ ಆರೋಪದ ಬಗ್ಗೆ ಮಾತನಾಡಿ ಯಾರಾದರೂ ಪಕ್ಷ ಬಿಟ್ಟು ಹೋದಾಗ ಏನಾದರೂ ಒಂದು ಕಾರಣ ಕೊಡಬೇಕು.
ಕಳೆದ 25 ವರ್ಷದ ಅವರ ರಾಜಕೀಯ ಜೀವನದಲ್ಲಿ ಬಿಜೆಪಿ ಶೆಟ್ಟರ್ ಗೆ ಎಲ್ಲವನ್ನೂ ಕೊಟ್ಟಿದೆ.
ಅವರನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ.ಹೋಗಿದ್ದಾರೆ ಅದಕ್ಕೊಂದು ನೆಪ ಅಷ್ಟೇ ಎಂದರು.

ನಿರೀಕ್ಷೆ ಮಾಡೋಲ್ಲ : ಜಗದೀಶ್ ಶೆಟ್ಟರ್ ಅವರು ವಾಪಸ್ಸು ಬರುವ ಬಗ್ಗೆ ಮಾತನಾಡಿ, ಅವರು ಹಿಂದುರಿಗಿ ಬರುವ ನಿರೀಕ್ಷೆ ಮಾಡೋಲ್ಲ ಎಂದರು.

ಚುನಾವಣಾ ಬಳಿಕ ಅವಮಾನ : ವೀರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸರನ್ನ ಹೊರಹಾಕಿದನಂಥ ಪಕ್ಷಕ್ಕೆ ಶೆಟ್ಟರ್ ಹೋಗಿದ್ದಾರೆ. ಮೊದಲು ಸನ್ಮಾನ ಮಾಡಿ ಚುನಾವಣಾ ಬಳಿಕ ಅವಮಾನ ಮಾಡ್ತಾರೆ. ಜಗದೀಶ ಶೆಟ್ಟರ್ ಅವರನ್ನ ಬಳಸಿಕೊಂಡು ಹೊರಗೆ ಹಾಕುತ್ತಾರೆ. ಬಿಎಸ್ ವೈ ಇರೋತನಕ ಲಿಂಗಾಯತರು ನಮ್ಮ ಜೊತೆ ಇರುತ್ತಾರೆ ಎಂದರು.


[ays_poll id=3]