K2kannadanews.in
Protest ಸಿಂಧನೂರು : ಒಂದು ತಿಂಗಳಿನಿಂದ (Month) ಶಾಲೆಯಲ್ಲಿ (school) ಶಿಕ್ಷಕರೇ ಇಲ್ಲದೆ ವಿದ್ಯಾರ್ಥಿಗಳು (students) ಪರದಾಡುತ್ತಿದ್ದು, ಪಾಲಕರು (parents) ಅಸಮಾಧಾನ ವ್ಯಕ್ತಪಡಿಸಿ ಶಾಲೆಗೆ ಬೀಗ (lock) ಹಾಕಿ, ಶಿಕ್ಷಣ ಇಲಾಖೆ ಅಧಿಕಾರಿಗಳೇ ಶಾಲೆ ಬೀಗ ತೆಗೆದುಕೊಂಡು ಹೋಗಿ ಎಂದು ಪ್ರತಿಭಟನೆ ಮಾಡಿದರು.
ರಾಯಚೂರು (officer’s)ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ದಡೇಸುಗೂರು ಗ್ರಾಮದಲ್ಲಿ ಘಟನೆ ಜರುಗಿದೆ. ಗ್ರಾಮದಲ್ಲಿನ ಉರ್ದು ಶಾಲೆಗೆ (urdhu) ಶಿಕ್ಷಕರೇ (teacher) ಇಲ್ಲದ ಹಿನ್ನೆಲೆ ಬೀಗ ಜಡಿದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು. ಇದ್ದೊಬ್ಬ ಸಹ ಶಿಕ್ಷಕಿ ಸೈಯದ್ ಶಬಾನಾ ಅಂಜುಮ್ ರನ್ನ ಸಹ, ಬಳ್ಳಾರಿ (ballary)ನಗರದ ಶಾಲೆಯೊಂದಕ್ಕೆ ಡೆಪ್ಯುಟೇಶನ್ ಮೇಲೆ ಕಳುಹಿಸಲಾಗಿದೆ.
ಈ ಒಂದು ಉರ್ದು ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಒಟ್ಟು 26 ವಿದ್ಯಾರ್ಥಿಗಳಿದ್ದಾರೆ. ಕಳೆದ ಒಂದು ತಿಂಗಳಿಂದ ಶಾಲೆಗೆ ಒಬ್ಬ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸುವಂತೆ ಆಗ್ರಹಿಸಿ ಶಾಲೆಗೆ ಬೀಗ ಹಾಕಿದ್ದು, ಪ್ರಸ್ತುತ ಶಾಲೆಗೆ ಶಿಕ್ಷಕರನ್ನಾದರೂ ಕೊಡಿ ಇಲ್ಲ ಅಧಿಕಾರಿಗಳೇ ಗ್ರಾಮಕ್ಕೆ ಬಂದು ಬೀಗ ತೆಗೆದುಕೊಂಡು ಹೋಗಿ ಎಂದು ಗ್ರಾಮಸ್ಥರ ಅಸಮಧಾನ ಹೊರಹಾಕಿದ್ದಾರೆ.