K2kannadanews.in
Crime News ಉತ್ತರ ಕನ್ನಡ : ಕುಳಿತು ಮಾತನಾಡಿಕೊಂಡು ಬಗೆಹರಿಸಿಕೊಳ್ಳಬೇಕಾದ ವಿಚಾರ, ಕೈ ಕೈ ಮೇಲಾಯಿಸಿ ತಾರಕಕ್ಕೆ ಏರಿ ಸಹೋದರನನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಅಣ್ಣ-ತಮ್ಮನ ನಡುವೆ ದೇವರಿಗೆ ಇಟ್ಟ ಹಣಕಾಸಿನ ವಿಚಾರಕ್ಕೆ ಗಲಾಟೆ ಆರಂಭವಾಗಿದೆ, ಜಗಳ ತಾರಕಕ್ಕೇರಿ, ಚಾಕುವಿನಿಂದ ಇರಿದು ಸಹೋದರನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಾರವಾರದ ಸಾಯಿಕಟ್ಟಾದಲ್ಲಿ ನಡೆದಿದೆ.
ಗಣೇಶನ ಪೂಜೆ ಹಾಗೂ ದೇವರಿಗೆ ಅಂತ ಇಟ್ಟ ಹಣದ ವಿಷಯದಲ್ಲಿ ಸಹೋದರರ ನಡುವೆ ಗಲಾಟೆಯಾಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿದೆ. ಆರೋಪಿ ಮನೀಶ್ ಕಿರಣ್ ತನ್ನ ಸಹೋದರನನ್ನು ಕೋಪದಲ್ಲಿ ಸಂದೇಶ್ ಪ್ರಭಾಕರ್ ಬೋರ್ಕರ್ ಕೊಲೆ ಮಾಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕಾರವಾರ ಪೊಲೀಸರು ಆರೋಪಿ ಮನೀಶ್ ಕಿರಣ್ನನ್ನು ಬಂಧಿಸಿದ್ದಾರೆ.