K2kannadanews.in
Headconstabl case ಸಿರವಾರ : ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತಾ ಗಾದೆನೇ ಇದೆ. ಆದ್ರೆ ಇಲ್ಲೊಬ್ಬ ಪೊಲೀಸ್ (police) ಪೇದೆ (PC) ಹಾಸಿಗೆ ಮೀರಿ ಕಾಲು ಚಾಚಿ ಪೇಚಿಗೆ ಸಿಲುಕಿದ್ದಾನೆ. ಹೌದು ರಾಯಚೂರಿನ ಸಿರವಾರ ಪೊಲೀಸ್ (Sirawar police) ಪೇದೆ ರಂಗಿನಾಟಕ್ಕೆ ಖುದ್ದು ಪತ್ನಿಯೇ (wife) ಕೆರಳಿದ್ದು, ಪ್ರೇಯಸಿ ಜೊತೆ ಇದ್ದ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ.
ರಾಯಚೂರು (Raichur) ಜಿಲ್ಲೆ ಸಿರವಾರ (Sirawar) ಪೊಲೀಸ್ ಠಾಣೆಯ ಕಾಮದಾಟಕ್ಕೆ ಖುದ್ದು ಪತ್ನಿಯೇ (Wife) ಫೀಲ್ಡ್ ಗೆ ಇಳಿದಿದ್ದಾಳೆ. ಇಂಟ್ರೆಷ್ಟಿಂಗ್ (Intresting) ಏನೂ ಅಂದ್ರೆ, ಇತ್ತ ಪತಿ ಸಿರವಾರ ಪೊಲೀಸ್ ಠಾಣೆಯ ಮುಖ್ಯ ಪೇದೆಯಾಗಿ ಕೆಲಸ ಮಾಡ್ತಿದ್ರೆ ಅತ್ತ ದೇವದುರ್ಗ (Devadurga) ಪೊಲೀಸ್ ಠಾಣೆಯಲ್ಲಿ ಪತ್ನಿ ಪಿ.ಸಿ ಯಾಗಿ ಕೆಲಸ ಮಾಡ್ತಿದ್ದಾರೆ. ಇಬ್ಬರೂ ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿದ್ದು, ಪ್ರೀತಿಸಿ (Love marriage) ಮದುವೆಯಾಗಿದ್ದರು. ಆರಂಭದಲ್ಲಿ ಇಬ್ಬರು ಅನ್ಯವಾಗಿ ಇದ್ದರು ಆದರೆ ಯಾವಾಗ ಕವಿತಾಳ ಪೊಲೀಸ್ ಠಾಣೆಗೆ ರಾಜ್ ಮಹಮ್ಮದ್ ಬಂದರೊ ಆಗ ಪತಿ ಪತ್ನಿ ಮಧ್ಯ ಬಿರುಕು ಆರಂಭವಾಗಿದೆ. ಕಳೆದ ನಾಲ್ಕು ವರ್ಷದಿಂದ ದೂರ ದೂರ ವಾಸ ಮಾಡ್ತಿದ್ದಾರೆ. ಇದಕ್ಕೆ ಕಾರಣ ಅಂದ್ರೆ ಈ ಲೇಡಿನೆ ನೋಡಿ.