K2kannadanews.in
Local News ರಾಯಚೂರು : ನಗರದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಸಿಬ್ಬಂದಿ ಫೋನ್ ಪೇ ನಲ್ಲಿ ಲಕ್ಷಕ್ಕೂ ಹೆಚ್ಚು ಹಣ ವರ್ಗಾವಣೆ ಕಂಡು ಗರಂ ಆಗಿ ಮಹಿಳಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಹಶೀದಾರ್ ಕಚೇರಿಯಲ್ಲಿ ಎಸ್ಡಿಎ ಶಿಲ್ಪ, ಸುನಿತಾ ಮತ್ತು ಸ್ಯಾನಿಟರಿ ಇನ್ಸ್ಪೆಕ್ಟರ್ ಲಕ್ಷ್ಮಿ ವಿರುದ್ಧ ಗರಂ ಆಗಿದ್ದಾರೆ. ತಾಸಿಲ್ದಾರ್ ಕಚೇರಿಯಲ್ಲಿ ತಪಾಸಣೆಯ ವೇಳೆ ಮಹಿಳಾ ಸಿಬ್ಬಂದಿಯ ಫೋನ್ ಪೇ ಮಾಡುವಾಗ ಉಪ ಅಚ್ಚರಿ ಕಾದಿತ್ತು, ಕಡಿಮೆ ಸಂಬಳ ಇದ್ದರೂ ಆದಾಯಕ್ಕೂ ಮೀರಿ ಒಂದು ಲಕ್ಷಕ್ಕೂ ಅಧಿಕ ಹಣ ಟ್ರಾನ್ಸ್ಫರ್ ಮಾಡಿದ್ದರಿಂದ, ಆ ಬಗ್ಗೆ ಮಾಹಿತಿ ಕೇಳಿದ್ದಾರೆ ಈ ವೇಳೆ ಅದಕ್ಕೆ ವಿವರಣೆ ನೀಡಲು ಹೋದ ಮಹಿಳಾ ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ. ಕಾನೂನು ಗೊತ್ತಾ, ನಿಮ್ಮ ಆದಾಯಕ್ಕಿಂತ ಹೆಚ್ಚು ಹಣ ವರ್ಗಾವಣೆ ಮಾಡಬೇಕಾದರೆ ಪರವಾನಿಗೆ ತೆಗೆದುಕೊಳ್ಳಬೇಕು, ನನ್ನ ದುಬಾಯಿಸಲು ಬರಬೇಡ ಎಂದು ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.