K2kannadanews.in
Crime News ಬೆಂಗಳೂರು : ಮನೇಲಿ (Home) ನೀರು ಕಾಯಿಸಲು ಹೀಟರ್ ಕಾಯಿಲ್ (water heater) ಉಪಯೋಗಿಸ್ತಿದ್ದೀರಾ. ಹಾಗಾದ್ರೆ ಈ ಸುದ್ದಿ (news) ನೀವು ಓದಲೇಬೇಕು. ಬೆಳಂ ಬೆಳಗ್ಗೆ ನೀರು ಕಾಯಿಸಲು ಇಟ್ಟ ವೇಳೆ ಪುಟ್ಟ ಕಂದಮ್ಮ (Baby) ಅದನ್ನ ಹಿಡಿದುಕೊಂಡಿದೆ. ಕಂದಮ್ಮನ ರಕ್ಷಿಸಲು ಹೋಗಿ ತಾಯಿ (Mother) ಪ್ರಾಣ ಕಳೆದುಕೊಂಡ ದಾರುಣ ಘಟನೆ ಬುಧವಾರದಂದು ನಡೆದಿದೆ.
ಹೌದು ಬೆಂಗಳೂರಿನ (Benglore) ಕೆ.ದೊಮ್ಮಸಂದ್ರ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ. ಅರುಣಾ (31) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸ್ನಾನಕ್ಕೆ (Bath) ನೀರು ಕಾಯಿಸಲು ಹೀಟರ್ ಕಾಯಿಲ್ ಹಾಕಿದ್ದ ವೇಳೆ, ಅಲ್ಲೆ ಆಡುತ್ತಿದ್ದ ಒಂದೂವರೆ ವರ್ಷದ ಮಗು ಆಟವಾಡುತ್ತಾ, ಹೀಟರ್ ಕಾಯಿಲ್ ಹಿಡಿದು, ಚೀರಾಡುತ್ತಿತ್ತು, ಅದನ್ನು ಗಮನಿಸಿದ ತಾಯಿ ಗಾಬರಿಯಲ್ಲಿ ಮಗುವನ್ನು ರಕ್ಷಿಸಲು ಹೋಗಿ ಗಂಭೀರ ಗಾಯಕೊಂಡಿದ್ದಳು.
ಚೀರಾಟ ಕೇಳಿ ಮನೆಗೆ ಬಂದ ಅಕ್ಕಪಕ್ಕದವರೆಲ್ಲ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಅದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ತಾಯಿ ಮೃತಪಟ್ಟಿದ್ದು. ಇನ್ನೂ ಮಗು ಕೂಡಾ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಘಟನೆಯು ಆವಲಹಳ್ಳಿ ಠಾಣಾ ವ್ಯಾಪ್ತಿಯ ಜರುಗಿದೆ.