K2kannadanews.in
Trading company ರಾಯಚೂರು : ದರ್ವೇಶ್ ಗ್ರೂಪ್ ಕಂಪನಿ ವಿರುದ್ಧ, ಹೂಡಿಕೆ ಮಾಡಿರುವ ಹೂಡಿಕೆದಾರರು ಅಸಮಾಧಾನ ಹೊರಹಾಕುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಹೂಡಿಕೆ ಮಾಡಿರುವ ಹಣ ಹಿಂದಿರುಗಿಸುವಂತೆ ಒತ್ತಾಯಿಸಿ, ಕಚೇರಿಯಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಕಚೇರಿಯಲ್ಲಿ ಒಂದಷ್ಟು ಸಾಮಗ್ರಿಗಳನ್ನು ನಾಶಪಡಿಸಲಾಗಿದೆ.
ಹೌದು ರಾಯಚೂರು ನಗರದ ಹೈದರಾಬಾದ್ ರಸ್ತೆಯಲ್ಲಿ ಇರುವಂತಹ ದರ್ವೇಶ್ ಗ್ರೂಪ್ ಕಂಪನಿ ವಿರುದ್ಧ ಇದೀಗ ಹೂಡಿಕೆದಾರರು ಅಸಮಾಧಾನಗೊಂಡಿದ್ದಾರೆ. ತಾವು ಹೂಡಿಕೆ ಮಾಡಿರುವ ಹಣ ವಾಪಸ್ ನೀಡುವಂತೆ ಒತ್ತಾಯಿಸಿ ಕಳೆದ 15 ದಿನಗಳಿಂದ ಕಚೇರಿಸುತ್ತಾ ಸುತ್ತುತ್ತಿದ್ದಾರೆ. ಆದರೆ ಮಾಣಿಕ ನಾಪತ್ತೆ ಆಗಿರುವ ಹಿನ್ನೆಲೆಯಲ್ಲಿ ಹಣ ವಾಪಸ್ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ದರ್ವೇಶ್ ಕಂಪನಿ ಮುಂಭಾಗದಲ್ಲಿ ನೂರಾರು ಜನ ಹೂಡಿಕೆದಾರರು ಸೇರಿದ್ದರು. ಈ ವೇಳೆ ಅಸಮಾಧಾನ ಗೊಂಡ ಹೂಡಿಕೆದಾರರು ಕಚೇರಿ ಒಳಗೆ ನುಗ್ಗಿ, ಬಾಗಿಲು ಸೇರಿ ಒಂದಷ್ಟು ಸಾಮಗ್ರಿಗಳು ನಾಶಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲ ಹುಡುಕಿದಾರರನ್ನು ಸಮಾಧಾನಪಡಿಸಿ ಕಚೇರಿಯಿಂದ ಆಚೆ ಕಳಿಸಿ ಪರಿಸ್ಥಿತಿ ಹತೋಟಿಗೆ ತಂದ ಘಟನೆ ನಡೆದಿತ್ತು. ಹೂಡಿಕೆದಾರರು ಇದೀಗ ತಾವು ಹೂಡಿಕೆ ಮಾಡಿದಷ್ಟು ಹಣ ಬಂದರೆ ಸಾಕು ಎಂಬ ನಿರೀಕ್ಷೆಯಲ್ಲಿ ಇದ್ದಾರೆ.