
K2 ಪೊಲಿಟಿಕಲ್ ನ್ಯೂಸ್ : ರವಿ ಕುಡಿದು, ಗಾಂಜಾ ಸೇವಿಸಿ ಮಾತನಾಡುತ್ತಾರೆ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ನಾನು ಡ್ಯಾಷ್ ಡ್ಯಾಷ್ ಹಿಡಿದು ರಾಜಕಾರಣ ಮಾಡಿದವನಲ್ಲ. ಎಂದು ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಕೆಸರೆರಚಟಗಳು ತೀವ್ರಗೊಳ್ಳುತ್ತಿವೆ. ಇತ್ತೀಚಿಗೆ ಬಿ.ಕೆ ಹರಿಪ್ರಸಾದ್ ಅವರು ಸಿ.ಟಿ ರವಿ ವಿರುದ್ಧ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದರು, ಆ ಒಂದು ಹೇಳಿಕೆಗೆ ಸಿ.ಟಿ ರವಿ ಅವರು ಕಾರವಾಗಿಯೇ ತಿರುಗೇಟು ನೀಡಿದ್ದಾರೆ. ಹರಿಪ್ರಸಾದ್ ಅವರು ತಮ್ಮ ನಾಯಕರನ್ನು ನೋಡಿ ಈ ಮಾತು ಹೇಳುತ್ತಿದ್ದಾರೆ. ನಾನು ಬಿಜೆಪಿಯ ಸಿ.ಟಿ.ರವಿಯೇ ಹೊರತು, ಪಪ್ಪು ಅಲ್ಲ. ಹರಿಪ್ರಸಾದ್ ಏನು ಹೇಳಿದ್ದಾರೋ ಅದೆಲ್ಲಾ ಅವರ ನಾಯಕನಿಗೆ ಅನ್ವಯ ಆಗುತ್ತದೆ. ನಾನು ಡ್ಯಾಷ್ ಡ್ಯಾಷ್ ಹಿಡಿದು ರಾಜಕಾರಣ ಮಾಡಿದವನಲ್ಲ. ನನ್ನ ವಿರುದ್ಧ ಸುಮ್ಮನೆ ಮಾತಾಡಬೇಡಿ. ಮಾತನಾಡಿದ್ರೆ ನಿಮ್ಮದೆಲ್ಲಾ ಬಿಚ್ಚಿಡಬೇಕಾಗುತ್ತದೆ ಎಂದು ಗುಡುಗಿದರು.
![]() |
![]() |
![]() |
![]() |
![]() |
[ays_poll id=3]