![]() |
![]() |
![]() |
![]() |
![]() |
ರಾಯಚೂರು : ಜಿಲ್ಲಾ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ವತಿಯಿಂದ ಜಿಲ್ಲಾದ್ಯಂತ ನಾಲ್ಕು ಲಕ್ಷ ಅಧಿಕ ಕುಟುಂಬಗಳ ಅಪೌಷ್ಟಿಕತೆ ಮತ್ತು ಆರೋಗ್ಯದ ವಿಚಾರಗಿ ಆನ್ ಲೈನ್ ಮೂಲಕ ನೊಂದಣಿ ಮಾಡಿಕೊಂಡು ಸೂಕ್ತ ಮಾಹಿತಿಯನ್ನು ಕಲೆ ಹಾಕುತ್ತಿದ್ದು ಹಾಗಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶಶಿಧರ ಕುರೇರ ಅವರು ತಿಳಿಸಿದರು.
ಅವರಿಂದು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಅಪೌಷ್ಠಿಕತೆಯ ಮಕ್ಕಳು, ಯುವಕರು, ಗರ್ಭಿಯರು ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಕುಟುಂಬ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿ. ಜಿಲ್ಲೆಯಾದ್ಯಂತ ನಾಲ್ಕು ಲಕ್ಷಕ್ಕೂ ಅಧಿಕ ಕುಟುಂಬಗಳ ಪ್ರತಿ ಮನೆಮನೆಗೂ ತೆರಳಿ ನಮ್ಮ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕರು ಪ್ರತಿ ಮನೆಯ ಒಂದು ವರ್ಷದಿಂದ 10 ವರ್ಷದ ಮಗು ಹಾಗೂ 10 ವರ್ಷದಿಂದ 19 ವರ್ಷದ ಯುವತಿ, ಯುವಕರು ಮತ್ತು ಗರ್ಭಿಣಿ ಸ್ತ್ರೀಯರ ಆರೋಗ್ಯ ಮತ್ತು ಅಪೌಷ್ಟಿಕತೆಯ ಬಗ್ಗೆ ಆನ್‌ಲೈನ್ ಮೂಲಕ ಅದರ ಮಾಹಿತಿಯನ್ನು ಸರ್ಕಾರಕ್ಕೆ ನೀಡಲು ಆಗಮಿಸುತ್ತಿದ್ದು, ಎಲ್ಲರೂ ಸಹಕರಿಸಬೇಕು ಹಾಗೆಯೇ ವೈಯಕ್ತಿಕವಾಗಿಯೂ ಕೂಡ ಆನ್‌ಲೈನ್ ಮೂಲಕ ನಿಮ್ಮ ಆರೋಗ್ಯದ ಮಾಹಿತಿ ನೀಡಬಹುದಾಗಿದೆ ಎಂದರು.
![]() |
![]() |
![]() |
![]() |
![]() |
[ays_poll id=3]