K2kannadanews.in
Local News ದೇವದುರ್ಗ : ಭಾನುವಾರ ದಿನದಂದು ಸರಕಾರಿ ವಾಹನವನ್ನು ದೇವದುರ್ಗ ತಹಸಿಲ್ದಾರ್ ಅವರು ಸ್ವಂತಕ್ಕೆ ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದೇವಪ್ಪ ನಾಯಕ್ ಹಂಚಿನಾಳ ಆರೋಪಿಸುತ್ತಿದ್ದಾರೆ.
ಹೌದು ದೇವದುರ್ಗ ತಹಶಿಲ್ದಾರ ಆಗಿರುವ ಚೆನ್ನಮಲ್ಲಪ್ಪ ಘಂಟಿ ಅವರು, ತಾಲೂಕಿನ ಸುಂಕೇಶ್ವರಾಳ ಗ್ರಾಮದಲ್ಲಿ ಇರುವ ತಮ್ಮ ಸಂಬಂದಿಗಳ (ಬೀಗರ) ಮನೆಗೆ ಸರ್ಕಾರಿ ವಾಹನದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ್ದರು ಎಂದು ಆರೋಪಿಸಿದ್ದಾರೆ. ಕಾನೂನು ಪ್ರಕಾರ ರಜಾದಿನಗಳಲ್ಲಿ ಸರ್ಕಾರಿ ವಾಹನಗಳನ್ನು ಬಳಸಬಾರದು ಅದರಲ್ಲೂ ತಮ್ಮ ಖಾಸಗೀ ಕೆಲಸಕ್ಕೆ ವಾಹನ ಬಳಸುವಂತಿಲ್ಲ. ಆದರೆ ಇಂದು ಸಂಕೇಶ್ವರಾಳ ಗ್ರಾಮಕ್ಕೆ ಸ್ವತಃ ತಾವೇ ಸರಕಾರಿ ವಾಹನವನ್ನು ಚಾಲನೆ ಮಾಡಿಕೊಂಡು ಪತ್ನಿ ಜೊತೆಗೆ ಸಂಬಂಧಿಗಳ ಮನೆಗೆ ಬಂದು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೊಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.