ದೇವದುರ್ಗ : ಸಿಡಿಲಿನಿಂದಾಗಿ ಹೊತ್ತಿ ಉರಿದ ಬುಲೆರೋ ವಾಹನ..

K 2 Kannada News
ದೇವದುರ್ಗ : ಸಿಡಿಲಿನಿಂದಾಗಿ ಹೊತ್ತಿ ಉರಿದ ಬುಲೆರೋ ವಾಹನ..
WhatsApp Group Join Now
Telegram Group Join Now

K2Kannadanews.in

Crime News ದೇವದುರ್ಗ : ನಿನ್ನೆ ಜಿಲ್ಲೆಯಾದ್ಯಂತ ಗುಡುಗು ಮಿಂಚು ಸಹಿತ ಭಾರಿ ಗಾಳಿ ಮಳೆಯಾಗಿದ್ದು, ಅನೇಕ ಅನಾಹುತಗಳು ಸೃಷ್ಟಿಯಾಗಿವೆ. ಈ ವೇಳೆ ತೆಂಗಿನ ಮರದ ಕೆಳಗೆ ನಿಲ್ಲಿಸಿದ್ದ ಬಿಲೇರೊ ಪಿಕಪ್ ವಾಹನವೊಂದು ಸಿಡಿಲಿನಿಂದಾಗಿ ಬೆಂಕಿಗೆ ಆಹುತಿಯಾದ ಘಟನೆ ಜರುಗಿದೆ.

ಹೌದು ರಾಯಚೂರು ಜಿಲ್ಲೆಯಾದ್ಯಂತ, ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಹೊಲದಲ್ಲಿ ನಿಲ್ಲಿಸಿದ್ದ ಬುಲೆರೋ ವಾಹನ ಸಿಡಿಲಿನಿಂದಾಗಿ ಹೊತ್ತಿ ಉರಿದಿದೆ. ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದ್ದು, ಸೋಮನಮರಡಿ ಗ್ರಾಮದ ಹನುಮಂತ್ರಾಯ ಗಣಜಲಿ ಎಂಬುವವರಿಗೆ ಸೇರಿದ ವಾಹನ ಸುಟ್ಟು ಕರಕಲಾಗಿದೆ. ವಾಹನದ ಪಕ್ಕದಲ್ಲಿದ್ದ ಶ್ರೀಧರ, ಪ್ರವೀಣ, ಹನುಮಂತಿ, ಲಕ್ಷ್ಮೀ, ಗೋಪಾಲನಾಯಕ, ಬಸವರಾಜ, ಹನುಮಗೌಡ ಎಂಬುವವರಿಗೂ ತಗುಲಿದ ಶಕೆ.

ಇನ್ನೂ ವಾಹನವನ್ನು ಜಮೀನಿನಲ್ಲಿದ್ದ ತೆಂಗಿನಮರದ ಕೆಳಗೆ ನಿಲ್ಲಿಸಲಾಗಿತ್ತು. ಸಿಡಿಲು ಮೊದಲು ತೆಂಗಿನಮರಕ್ಕೆ ಬಿದ್ದಿದೆ. ನಂತರ ಅದರ ಕಿಡಿ ಪಕ್ಕದಲ್ಲೆ ಇದ್ದ ಹುಲ್ಲಿನ ಬಣವೆಗೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬಣಿವೆ ಪಕ್ಕದಲ್ಲೆ ನಿಲ್ಲಿಸಲಾಗಿದ್ದ ವಾಹನಕ್ಕೂ ಸಹ ಬೆಂಕಿ ತಗುಲಿ ಅಚಾತುರ್ಯ ನಡೆದಿದೆ ಎನ್ನಲಾಗುತ್ತಿದೆ.

WhatsApp Group Join Now
Telegram Group Join Now
Share This Article