
ಲಿಂಗಸುಗೂರು : ತಾಲೂಕಿನ ಗುಂತಗೋಳ ಗ್ರಾಮದಲ್ಲಿ ಡೆಂಗ್ಯೂ ಹಾಗೂ ಝಿಕಾ ವೈರಸ್ ಜ್ವರ ಕುರಿತು ಆರೋಗ್ಯೆ ಇಲಾಖೆಯು ಸಾರ್ವಜನಿಕರಿಗೆ ಮುಂಜಾಗ್ರತೆ ಮಾಹಿತಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಲಿಂಗಸುಗೂರು ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್ ಮಾಹಿತಿಯನ್ನು ನೀಡಿದರು ಸ್ವಚ್ಛ ನೀರಿನಲ್ಲಿ ಕಂಡುಬರುವ ಈಡೀಸ್ ಲಾರ್ವಾಗಳು ಸೊಳ್ಳೆಯಾಗಿ ಹೊರಬಂದು ಸೋಂಕಿತರ ಸಂಪರ್ಕ ಹೊಂದಿ ಆರೋಗ್ಯ ವಂತರಿಗೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಸಮುದಾಯದಲ್ಲಿ ಹರಡುವುದು ಆದ್ದರಿಂದ ಮನೆಯಲ್ಲಿ ಬಳಸುವ ನೀರಿನ ತೊಟ್ಟಿ ಇತರ ಪರಿಕರಗಳನ್ನು ವಾರದಲ್ಲಿ ಎರಡೂ ಬಾರಿ ತೊಳೆಯುವುದು ಹಾಗೂ ಭದ್ರವಾಗಿ ಮುಚ್ಚಿಡುವುದು. ಗ್ರಾಮದಲ್ಲಿ ಪರಿಸರ ಸ್ವಚ್ಛತೆ ಕಾಪಾಡಬೇಕು. ಗರ್ಭಿಣಿಯರಲ್ಲಿ ಝಿಕಾ ಸೋಂಕು ಉಂಟಾದರೆ ಹುಟ್ಟುವ ಮಗು ತೊಂದರೆ ಗೀಡಾಗುವುದು. ಮಕ್ಕಳು ಮತ್ತು ವ್ರಧ್ಧರಿಗೆ ತೀವ್ರ ತೊಂದರೆ ಯಾಗುತ್ತದೆ.
![]() |
![]() |
![]() |
![]() |
![]() |
[ays_poll id=3]