This is the title of the web page
This is the title of the web page
Local News

ನಗರಸಭೆಯನ್ನು ಸೂಪರ್ ಸೀಡ್ ಮಾಡಲು ಆಗ್ರಹ


ರಾಯಚೂರು : ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ನಗರಸಭೆಗೆ ಆರ್ಥಿಕ ನಷ್ಟವಾಗುತ್ತಿದ್ದರು ಕೂಡ ನಗರಸಭೆ ಅಧ್ಯಕ್ಷರು ಮೌನವಹಿಸಿದ್ದಾರೆ ಕೂಡಲೇ ನಗರಸಭೆಯನ್ನು ಸೂಪರ್ ಸೀಡ್ ಮಾಡಬೇಕು ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಮಹಾವೀರ ಒತ್ತಾಯಿಸಿದರು.

ರವೀಂದ್ರ ಜಲ್ದಾರ್ ಅವರು ಆದಾಯ ತೆರಿಗೆ ಇಲಾಖೆಗೆ ಮತ್ತು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇವರು ಬೊಳಮಾನದೊಡ್ಡಿ ರಸ್ತೆಯಲ್ಲಿರುವ ಆಶೀರ್ವಾದ ಲೇಔಟ್‌ನಲ್ಲಿ ಸುಮಾರು 1 ಕೋಟಿ 50 ಲಕ್ಷ ರೂ. ಭವ್ಯವಾದ ಬಂಗಲೆಯನ್ನು ಕಟ್ಟಿಸಿದ್ದಾರೆ. ಇವರು ತಮ್ಮ ಆದಾಯಕ್ಕಿಂತ ಕಡಿಮೆ ಆದಾಯ ತೋರಿಸಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹೊಲ,ಮನೆ ಮತ್ತು ಗುತ್ತಿಗೆದಾರರಿ ಕೆಲಸದಿಂದ ಕೊಟ್ಯಾಂತರರ ರೂಪಾಯಿ ಗಳಕೆ ಮಾಡಿ ತಾನೋಬ್ಬ ಕಂಪನಿಯಲ್ಲಿ ಕೆಲಸ ಮಾಡುವ ಸೂಪರ್ ವೈಸರ್ ಎಂದು ಆದಾಯ ತೆರಿಗೆ ಇಲಾಖೆಗೆ ಆದಾಯ ಪಾವತಿಸಿರುವುದು ಆದಾಯ ಇಲಾಖೆಯಿಂದ ತಿಳಿದು ಬಂದಿದೆ.

ನಗರದ ಅನೇಕ ಮುಖ್ಯ ಬೀದಿಗಳಲ್ಲಿ ವಿದ್ಯುತ್ ದೀಪಗಳಿಲ್ಲ, ಮುಖ್ಯರಸ್ತೆಗಳಲ್ಲಿ ಮಾತ್ರ ಸ್ವಚ್ಛತೆಯ ಕಾರ್ಯ ನಡೆಯುತ್ತಿದೆ. ನಗರದ ಎಲ್ಲಾ ವಾರ್ಡಗಳಲ್ಲಿ ಅಸ್ವಚ್ಛತೆ ಎದ್ದುಕಾಣುತ್ತಿದೆ. ಯಾವ ವಾರ್ಡಗಳಿಗೆ ಹೊದರೂ ಕಸದ ರಾಶಿ ರಸ್ತೆ ಪಕ್ಕದಲ್ಲಿ ಕಾಣುತ್ತದೆ. ನಗರಸಭೆಗೆ ಬರುವ ಆದಾಯಕ್ಕೆ ರವೀಂದ್ರ ಜಲ್ದಾರವರು ಆರ್ಥಿಕ ನಷ್ಟ ಉಂಟು ಮಾಡಿದರೂ ನಗರಸಭೆ ಅಧ್ಯಕ್ಷರು ಮೌನವಾಗಿದ್ದಾರೆ ಯಾಕೆ ಎಂದು ಪ್ರಶ್ನಿಸಿದರು. ಸುಮಾರು ರೂ.40 ಲಕ್ಷ ರೂ ನಗರಸಭೆ ಆದಾಯಕ್ಕೆ ಪೆಟ್ಟು ನೀಡಿರುವ ರವೀಂದ್ರ ಜಲ್ದಾರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ನಗರಸಭೆ ಅಧ್ಯಕ್ಷರು ಹಿಂದೇಟು ಹಾಕುತ್ತಿರುವುದು ಶೋಚನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.


[ays_poll id=3]