
ರಾಯಚೂರು : ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಮತ್ತು ಗೌರವಧನ ಹೆಚ್ಚಳ ಮಾಡಿ, ಶಿಕ್ಷಕರ ನೇಮಕಾತಿಯಲ್ಲಿ ಅತಿಥಿ ಶಿಕ್ಷಕರ ಸೇವೆಯನ್ನು ಪರಿಗಣಿಸಿ 1 ವಾರ್ಷಕ್ಕೆ 5 ಕೃಪಂಕ ನೀಡಬೇಕು ಎಂದು ಒತ್ತಾಯಿಸಿ ಅತಿಥಿ ಶಿಕ್ಷಕರ ಸಮತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಪ್ರತಿ ತಿಂಗಳು 1ನೇ ತಾರೀಖು ದಂದು ವೇತನ ಜಮಾ ಮಾಡಬೇಕು.
ಪ್ರತಿ ವರ್ಷ ಅಶಿಥಿ ಶಿಕ್ಷಕರ ನೇಮಕಾತಿ ಪಕ್ತಿಯಯಲ್ಲಿ ಅತಿಥಿ ಶಿಕ್ಷಕದ ಹಿಂದಿನ ಸೇವಾ ಹಿರಿತನವನ್ನು ಪರಿಗಣಿಸಿ ಮೊದಲ ಆಧ್ಯತೆ ನೀಡಬೇಕು. ಅತಿಥಿ ಶಿಕ್ಷಕರಿಗೆ ಕನಿಷ್ಠ ೨೦ ಸಾವಿರ ಗೌರವಧನ ನೀಡಬೇಕು. ಖಾಯಂ ಶಿಕ್ಷಕರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿರುವ ನಮಗೂ ಅಜನ ತಿಂಗಳಲ್ಲಿ ಪೂರ್ಣವೇತನ ನೀಡಬೇಕು.
ಪ್ರತಿ ಶೈಕ್ಷಣಿಕ ವರ್ಷ ಜೂನ 1ರಿಂದ ಏಪ್ರಿಲ್ 10 ರವರೆಗೂ ನಡೆಯುವ ಶೈಕ್ಷಣಿಕ ಚಟುವಟಿಕೆಗಳಲ್ಲಿ
ನಮ್ಮನ್ನು ಮಾರ್ಚ್ 31ಬಿಡುಗಡೆಗೊಳಿಸದೇ ಏಪ್ರಿಲ್ 10ರ ವರೆಗೂ ವಿಸ್ತರಿಸಬೇಕು. ಅತಿಥಿ ಶಿಕ್ಷಕರಿಗೆ ಆರ್ಥಿಕ ಭದ್ರತೆಗಾಗಿ ಪಿ.ಎಫ್. ಮತ್ತು ಇಎಸ್.ಐ. ಗಳನ್ನು ನೀಡಬೇಕು. ಶಿಕ್ಷಕರ ನೇಮಕಾತಿಯಲ್ಲಿ ಶೇ 5 ರಷ್ಟು ಹುದ್ದೆಗಳನ್ನು ಅತಿಥಿ ಶಿಕ್ಷಕರಿಗೆ ಮೀಸಲಿಡಬೇಕು.
ಅತಿಥಿ ಶಿಕ್ಷಕರು ಕರ್ತವ್ಯದ ವೇಳೆ ಜೀವ ಹಾನಿ ಉಂಟದಾಗ ಸರಕಾರದಿಂದ ಪರಿಹಾರ ಧನ ನೀಡಬೇಕು.ಸರಕಾರಿ ನೌಕರರಿಗೆ ವಾರ್ಷಿಕವಾಗಿ ಸಾಂಧರ್ಬಿಕ ರಜೆ ಮತ್ತು ಎರಡು ನಿರ್ಭಂದಿತ ರಜೆ ಇರುವ ಹಾಗೆ ಕನಿಷ್ಠ ಮಾನವಿಯ ದೃಷ್ಟಯಿಂದ ತಿಂಗಳಿಗೆ 10 ಸಿಎಲ್, ಅನ್ನು ಅತಿಥಿ ಶಿಕ್ಷಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
![]() |
![]() |
![]() |
![]() |
![]() |
[ays_poll id=3]