
K2 ಕ್ರೈಂ ನ್ಯೂಸ್ : ಲಕ್ಷ್ಮಸಾಗರ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುವಾಗ ಕೆಲ ದುಷ್ಕರ್ಮಿಗಳು ಜಿಂಕೆ ಭೇಟೆಯಾಡಿ ಮಾಂಸ ಕತ್ತರಿಸುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿದ್ದಾರೆ. ಸಿಬ್ಬಂದಿಗಳನ್ನು ನೋಡುತ್ತಿದ್ದಂತೆ ಓಡಲು ಯತ್ನಿಸಿದ್ದು, ಅವರಲ್ಲಿ ಒಬ್ಬ ಆರೋಪಿತನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವನ್ಯಜೀವಿ ವಲಯ ಅರಣ್ಯಾಧೀಕಾರಿ ಸಂಜೀವಕುಮಾರ ಚವ್ಹಾಣ ತಿಳಿಸಿದ್ದಾರೆ.
ಕುಂಚಾವರಂ ಶಾಖೆಯ ಉಪವಲಯ ಅರಣ್ಯಧೀಕಾರಿಗಳು ಹಾಗೂ ಸಿಬ್ಬಂದಿಗಳು ಅರಣ್ಯದಲ್ಲಿ ಗಸ್ತು ಉಳಿಯುತ್ತಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಚುಕ್ಕೆ ಜಿಂಕೆಯ ಹಸಿ ಚರ್ಮ ಹಾಗೂ ಮಾಂಸ ಪಾಲು ಹಾಕಿ ಫ್ಲಾಸ್ಟಿಕ್ ಪಾಕೆಟ್ ಗಳಲ್ಲಿ ಹಾಕುತ್ತಿರುವಾಗ ಒಬ್ಬ ಆರೋಪಿ ರಾಜು ಯಲ್ಲಪ್ಪ ಎಂಬುವನಿಗೆ ಬಂಧಿಸಲಾಗಿದ್ದು ಇಬ್ಬರು ಆರೋಪಿತರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿತರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 9,29(1),31,39,48(ಎ)ಮತ್ತು 51ಪ್ರಕಾರ ಪ್ರಕರಣ ದಾಖಲು ಮಾಡಲಾಗಿದೆ ಪರಾರಿ ಆರೋಪಿತರನ್ನು ಬಂಧಿಸಲು ಜಾಲಾ ಬಿಸಲಾಗಿದೆ.
ಜಿಂಕೆ ಭೇಟೆಯಾಡಲು ಬಳಸಿದ ಚೂರಿ,ಕಟ್ಟಿಗೆ ತುಂಡು, ಬೆಂಡಿಂಗ್ ವಾಯರ್ 100ಫೀಟ್, ಕಪ್ಪು ಟೋಪಿಗೆ, ಜಿಂಕೆಯ ಹಸಿ ಚರ್ಮ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]