This is the title of the web page
This is the title of the web page
Local News

ಡಿ.29: ಏಮ್ಸ್ ಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ರ‌‌್ಯಾಲಿ


ರಾಯಚೂರು :- ತಾರಾನಾಥ ಶಿಕ್ಷಣ ಸಂಸ್ಥೆ ಹಾಗೂ ರಾಯಚೂರಿನ ಎಲ್ಲಾ ಖಾಸಗಿ ಅನುದಾನಿತ, ಅನುದಾನ ರಹಿತ ಪ್ರೌಢಶಾಲಾ, ಕಾಲೇಜುಗಳ ಸಹಯೋಗದಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ಒತ್ತಾಯಿಸಿ ಡಿಸೆಂಬರ್ 29ರಂದು ಬೃಹತ್ ಪ್ರತಿಭಟನಾ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಹೇಳಿದರು.

ಅವರಿಂದು ನಗರದ ಎಸ್.ಎಸ್.ಆರ್.ಜಿ ಕಾಲೇಜಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ 9:30ಕ್ಕೆ ನಗರದ ಎಲ್ ವಿ ಡಿ ಕಾಲೇಜ್ ಮೈದಾನದಿಂದ ತಿಮ್ಮಾಪುರ ಪೇಟೆ ರಸ್ತೆ, ವಿವೇಕಾನಂದ ಸರ್ಕಲ್ ನೇತಾಜಿ ವೃತ್ತ,ತೀನ್ ಕಂದೀಲ್, ಏಕ್ ಮಿನಾರ್ ರಸ್ತೆ, ಅಂಬೇಡ್ಕರ್ ವೃತ್ತದ ಮುಖಾಂತರ ಮಹಾತ್ಮ ಗಾಂಧಿ ಸ್ಟೇಡಿಯಂ ವರೆಗೆ ಬೃಹತ್ ಪ್ರತಿಭಟನ ರ‌್ಯಾಲಿ ನಡೆಯಲಿದೆ ಎಂದರು.

ಏಮ್ಸ್ ಸ್ಥಾಪಿಸಲು ಬೇಕಾದ ಎಲ್ಲಾ ಪೂರಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮುಚ್ಚಳಿಕೆ ಬರೆದು ಕೊಡಬೇಕು. ಕೇಂದ್ರ ಸರ್ಕಾರಕ್ಕೆ ರಾಯಚೂರಿನಲ್ಲಿ ಮಾತ್ರ ಸ್ಥಾಪಿಸುವ ಏಕೈಕ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಅವರು, ಈ ರ‌್ಯಾಲಿಯಲ್ಲಿ ಎಲ್ಲಾ ಖಾಸಗಿ ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪ್ರಗತಿಪರ ಚಿಂತಕರು ಮತ್ತು ಸಾರ್ವಜನಿಕ ಭಾಗವಹಿಸಬೇಕು ಎಂದು ಮನವಿ ಮಾಡಿದರು.,


[ays_poll id=3]