
ರಾಯಚೂರು : ಸ್ವರಸಂಗಮ ಸಂಗೀತ ವಿದ್ಯಾಸಂಸ್ಥೆ ವತಿಯಿಂದ ಸಂಗೀತ ರತ್ನ, ಸಂಗೀತ ಸುಧಾಕರ ಪಂಡಿತ್ ಶ್ರೀ ಸಿದ್ದರಾಮಯ್ಯ ಜಂಬಲ್ದಿನ್ನಿ ಅವರ 34ನೇ ಪುಣ್ಯ ಸ್ಮರಣೆಯ ಅಂಗವಾಗಿ ಡಿಸೆಂಬರ್ 24ರಂದು ಸಂಜೆ 6 ಗಂಟೆಗೆ ಸ್ವರ ಸಂಗಮ ಸಂಗೀತ ವಿದ್ಯಾ ಸಂಸ್ಥೆ ಉದಯನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ನರಸಿಂಹಲು ವಡವಾಟಿ ಅವರು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಉದ್ಘಾಟಕರಾಗಿ ಜಿಲ್ಲಾಧಿಕಾರಿಗಳಾದ ಚಂದ್ರಶೇಖರ್ ನಾಯಕ್ ಅವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರು ವಹಿಸಲಿದ್ದಉ, ಕಾರ್ಯಕ್ರಮದಲ್ಲಿ ರೇಖಾ ದಿನೇಶ್, ರಾಮುಲು ಬೀದರ್, ಶಾರದಾ ಭರತ್, ವಿಜಯಲಕ್ಷ್ಮಿ ಕೆ ನರಸಿಂಹಲು, ಕೃಷ್ಣ, ಹೆಚ್ಚು ಸರಸ್ವತಿ, ಮಹಾಲಕ್ಷ್ಮಿ, ವಾಮನ ಮುಂತಾದ ಕಲಾವಿದರು ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಾದ್ಯ ಸಹಕಾರರಾಗಿ ಈರಣ್ಣ ಜಾಲಿಬೆಂಚಿ, ಗೋಪಾಲ್ ಗುಡುಬಂಡಿ, ಸುದರ್ಶನ್ ಅಸ್ಕಿಹಾಳ, ಶ್ರೀ ಪಾದದಾಸ್ ಪಾಲ್ಗೊಳ್ಳರಿದ್ದಾರೆ.
![]() |
![]() |
![]() |
![]() |
![]() |
[ays_poll id=3]