K2kannadanews.in
Karekal railway under bridge ರಾಯಚೂರು : ತಾಲೂಕಿನಾದ್ಯಂತ ಉತ್ತಮ ಮಳೆಯಾಗಿ (rain) ರೈತರ ಮುಖದಲ್ಲಿ ಸಂತಸ (Farms happy) ಅರಳಿದೆ. ಇನ್ನೂ ಕೆಲವೆಡೆ ಕೆಲ ಅವಾಂತರಗಳನ್ನು ಸೃಷ್ಟಿಸಿದೆ. ಕರೇಕಲ್ ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಮಳೆ ನೀರು (Railway water) ನಿಂತು ವಾಹನ ಸವಾರರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ದಿನಗಳಿಂದ ರಾಯಚೂರು ತಾಲ್ಲೂಕಿನಲ್ಲಿ, ರಾತ್ರಿಯಿಡೀ ಸುರಿದ ಮಳೆಗೆ ಕೆಲವಡೆ ಅವಾಂತರ ಸೃಷ್ಟಿಸಿದೆ. ರೈಲ್ವೆ ಅಂಡರ್ ಪಾಸ್ ಕೆಳಗೆ ಮಳೆ ನೀರು ನಿಂತು ಕೆರೆಯಂತಾಗಿದೆ. ತಾಲ್ಲೂಕಿನ ಕರೇಕಲ್ ಗ್ರಾಮದ ರೈಲ್ವೆ ಅಂಡರ್ ಪಾಸ್ ನಲ್ಲಿ ಅವಾಂತರ ಸೃಷ್ಟಯಾಗಿದೆ.
ರಾಯಚೂರು ಗ್ರಾಮೀಣ ತಾಲೂಕು ವ್ಯಾಪ್ತಿಯ ಕರೇಕಲ್ ಗ್ರಾಮಕ್ಕೆ ತೆರಳುವ ಅಂಡರ್ ಪಾಸ್ ನಲ್ಲಿ ಮಳೆ ನೀರಿನಿಂದ ವಾಹನ ಸವಾರರಿಗೆ ಒಡಾಡಲು ಪರದಾಡುವಂತಾಗಿದೆ. ಕೆರೆಯಂತೆ ನಿಂತಿರೋ ನೀರಿನಲ್ಲಿ ತೆರಳಲಾಗದೆ ಪರದಾಡುತ್ತಿದ್ದಾರೆ. ಈ ಒಂದು ಸಮಸ್ಯೆ ಸಾಕಷ್ಟು ವರ್ಷಗಳಿಂದ ಇದ್ದು. ಪ್ರತಿ ಮಳೆಗಾಲದಲ್ಲೂ ಇದೆ ಪರಿಸ್ಥಿತಿ ಇರುತ್ತದೆ. ಸಂಬಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.