K2kannadanews.in
Baranti’s death ಸಿಂಧನೂರು : ರಾಜ್ಯದಲ್ಲಿ ಆಗುತ್ತಿರುವ ಬಾಣಂತಿಯರ ಸಾವಿನ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಈ ಒಂದು ಘಟನೆಗೆ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಸಚಿವರು ತಲೆದಂಡ ತೆರಬೇಕು ಅಲ್ಲದೇ ಕಳಪೆ ಔಷಧಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸತ್ಯಶೋದನಾ ಸಮಿತಿ ಸದಸ್ಯ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಆರೋಪಿಸಿದರು.
ರಾಯಚೂರ ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಮೃತಪಟ್ಟ ವಿವಿಧ ಬಾಣಂತಿಯರ ಮನೆಗಳಿಗೆ ಭೇಟಿ ನೀಡಿದ ಸತ್ಯ ಶೊಧನಾಸಮಿತಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವ ಬಗ್ಗೆ ಮಾಹಿತಿಯನ್ನು ಪಡೆದರು. ಇನ್ನು ಬಾಣತಿಯನ್ನ ಕಳೆದುಕೊಂಡ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಹಸುಗಂದನನ್ನು ಆರೈಕೆ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣಾವಗಿದೆ. ಬಾಣಂತಿಯರ ಸಾವಿನ ಪ್ರಕರಣ ಆಗಿರುವಲ್ಲಿಗೆ ಸಮಿತಿ ಭೇಟಿ ಕೊಡುತ್ತಿದೆ ಎಂದರು. ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ, ಮುಖಂಡ ಡಾ. ಬಸವರಾಜ್ ಕ್ಯಾವಟರ್, ಡಾ. ಅರುಣಾ, ಡಾ.ನಾರಾಯಣ್, ಕ್ಷೇತ್ರದ ನಾಯಕರಾದ ಕರಿಯಪ್ಪ, ವಿರೂಪಾಕ್ಷಪ್ಪ ಅವರು, ಜಿಲ್ಲಾ ಪಂಚಾಯಿತಿ ಸದಸ್ಯರು ಮೃತಪಟ್ಟ ಬಾಣಂತಿಯರ ಮನೆಗೆ ಭೇಟಿ ಕೊಟ್ಟಿದ್ದೇವೆ.
ಕೋಲ್ಕತ್ತ ಕಂಪೆನಿಯಿಂದ ಸರಬರಾಜಾದ ಔಷಧಿಯ ಪರಿಣಾಮವಾಗಿ ಬಳ್ಳಾರಿಯಲ್ಲಿ 6 ಜನರು ಮೃತಪಟ್ಟ ಮಾದರಿಯಲ್ಲೇ ಹಲವೆಡೆ ಸಾವು ಸಂಭವಿಸುತ್ತಿದೆ ಎಂದರು. ಆದರೂ ಔಷಧಿ ಬಗ್ಗೆ ಸರ್ಕಾರವಾಗಲಿ ಆರೋಗ್ಯ ಸಚಿವರಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಇನ್ನು ರಾಯಚೂರು ಜಿಲ್ಲೆಯಲ್ಲಿ 12 ಬಾಣಂತಿಯರ ಸಾವಾದರೂ ಸರ್ಕಾರದ ಯಾವೊಬ್ಬ ಸಚಿವರು ಇಲ್ಲಿಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಮಾನವೀಯತೆಗೂ ಒಮ್ಮೆ ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಬಾಣಂತಿಯರ ಸಾವಿಗೆ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಸಚಿವರೆ ತಲೆದಂಡ ತರಬೇಕು ಎಂದರು.