ಮಹಿಳೆಯರು ಇನ್ಮುಂದೆ ಟಿಕೆಟ್ ಕೊಟ್ಟು ಪ್ರಯಾಣಿಸಬೇಕು: ಪರಿಷ್ಕರಣೆ ಸುಳಿವು ಕೊಟ್ಟ ಡಿಸಿಎಂ..

K 2 Kannada News
ಮಹಿಳೆಯರು ಇನ್ಮುಂದೆ ಟಿಕೆಟ್ ಕೊಟ್ಟು ಪ್ರಯಾಣಿಸಬೇಕು: ಪರಿಷ್ಕರಣೆ ಸುಳಿವು ಕೊಟ್ಟ ಡಿಸಿಎಂ..
WhatsApp Group Join Now
Telegram Group Join Now

K2kannadanews.in

Shakti scheme ನ್ಯೂಸ್ ಡೆಸ್ಕ್ : ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಶಾಕ್, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ, ಪರಿಷ್ಕರಣೆ ಮಾಡುವ ಬಗ್ಗೆ ಸುಳಿವು ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್.

 

ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಕೊಟ್ಟ ಭರವಸೆಯಂತೆ ಮಹಿಳೆಯರಿಗಾಗಿ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಲು ಶಕ್ತಿ ಯೋಜನೆ ಜಾರಿ ಮಾಡಲಾಗಿತ್ತು. ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಐರಾವತ ಕ್ಲಬ್ ಕ್ಲಾಸ್ 2.0 ಬಸ್ಸುಗಳಿಗೆ ಚಾಲನೆ ನೀಡಿದರು ಈ ವೇಳೆ ಮಾತನಾಡಿದ ಅವರು, ಸಾಕಷ್ಟು ಮಹಿಳೆಯರು ನನಗೆ ಇ-ಮೇಲ್, ಮೆಸೇಜ್ ಮಾಡಿ ನಾವು ಟಿಕೆಟ್‌ಗೆ ಹಣ ಕೊಡುವುದಕ್ಕೆ ಸಿದ್ಧವಾಗಿದ್ದೇವೆ. ನಮಗೆ ಉಚಿತ ಪ್ರಯಾಣ ಬೇಡವೆಂದು ಮೆಸೇಜ್ ಹಾಕಿದ್ದಾರೆ. ಯೋಜನೆ ಪರಿಷ್ಕರಣೆ ಮಾಡುವ ಬಗ್ಗೆ ಖುದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸುಳಿವು ನೀಡಿದ್ದಾರೆ.

ಹೀಗಾಗಿ ನಾವು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಚಿವರು ಸೇರಿ ಸರ್ಕಾರದ ಹಂತದಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಎಲ್ಲೋ ಒಂದು ಕಡೆ ರಾಜ್ಯದಲ್ಲಿ ಕೊಟ್ಟ ಮಾತಿನಂತೆ ಜಾರಿ ಮಾಡಿರುವ ಪಂಚ ಗಾರಂಟಿ ಯೋಜನೆಗಳಿಂದ ಸರ್ಕಾರದ ಬೊಕ್ಕಸೆ ಖಾಲಿಯಾಗಿ ಕಾಂಗ್ರೆಸ್ ಸರ್ಕಾರ ಆರ್ಥಿಕ ಹೊಡೆತ ಅನುಭವಿಸುತ್ತಿದೆ. ಈ ಮೂಲಕ ಒಂದೊಂದೇ ಯೋಜನೆಗಳನ್ನ ಪರಿಷ್ಕರಣೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ಯಾ ಎಂಬ ಸುಳಿವು ಸಿಕ್ಕಿದೆ. ಆದರೆ ಸದ್ಯ ಸರ್ಕಾರದ ಹಂತದಲ್ಲಿ ಯಾವುದೇ ಯೋಜನೆಗಳನ್ನ ನಿಲ್ಲಿಸುವ ಯೋಚನೆ ಇಲ್ಲ ಎಂಬ ಬಗ್ಗೆ ಕೂಡ ಮಾತುಗಳು ಕೇಳಿ ಬರುತ್ತಿವೆ.

WhatsApp Group Join Now
Telegram Group Join Now
Share This Article