K2kannadanews.in
Treading company case CID ರಾಯಚೂರು : ದರ್ವೇಶ್ ಗ್ರೂಪ್(Darvesh group) ಕಂಪನಿಯಿಂದ (Company) ವಂಚನೆ ಆರೋಪ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನಲೆ ಪ್ರಕರಣವನ್ನು ರಾಯಚೂರು ಪೊಲೀಸರು (Police) ಸಿಐಡಿಗೆ(CID) ವರ್ಗಾವಣೆ ಮಾಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂದಿಸಿದಂತೆ ರಾಯಚೂರಿನ (Raichur) ಸಿಇಎನ್ ಠಾಣೆಯಲ್ಲಿ (CEN station) ವಂಚನೆ ಆರೋಪ ಕುರಿತು ದೂರು (Case) ದಾಖಲಾಗಿತ್ತು. ಸದ್ಯ ಪ್ರಕರಣ ಸಿಐಡಿಗೆ (CID) ವರ್ಗಾವಣೆ ಹಿನ್ನೆಲೆ ಶೀಘ್ರದಲ್ಲೇ ಸಿಐಡಿ ತಂಡ ರಾಯಚೂರಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಪ್ರಕರಣದ ತನಿಖಾ ವರದಿ (investigation report), ಹೂಡಿಕೆದಾರರ (Investors) ಹಾಗೂ ಕಂಪನಿ ಮಾಲೀಕರ (Owner) ಮಾಹಿತಿಯನ್ನ ರಾಯಚೂರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳಿಂದ ಸಿಐಡಿ ಪಡೆಯಲಿದೆ. ಒಂದು ಕಡೆ ವಿಡಿಯೋ ಮೂಲಕ ಮಾಲಿಕ ಹಣ ಹಿಂತಿರುಗಿಸು ಭರವಸೆ ನೀಡಿದ್ದರೆ, ಇನ್ನೊಂದು ಕಡೆ ಪೊಲೀಸರು ಪ್ರಕರಣವನ್ನು ಸಿಐಡಿ ಗೆ ವಹಿಸಿದ್ದಾರೆ.