K2kannadanews.in
Yadagiri bandh protest ರಾಯಚೂರು : ರಾಜ್ಯದಲ್ಲಿ ದಲಿತ ಅಪ್ರಾಪ್ತ ಬಾಲಕೀಯರು, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಚಾರಗಳು ನಿರಂತರವಾಗಿ ನಡೆಯುತ್ತಿದ್ದು. ಕ್ರಮ ಕೈಗೊಳ್ಳದ ಸರಕಾರ ಪೊಲೀಸ್ ಇಲಾಖೆ ವಿರುದ್ಧ ಸೆಪ್ಟೆಂಬರ್ 30ರಂದು ಯಾದಗಿರಿ ಬಂದ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಧೂಳಯ್ಯ ಗುಂಜಳ್ಳಿ ಹೇಳಿದರು.
ಇನ್ನೂ ಕರ್ನಾಟಕದಲ್ಲಿ ಗೃಹ ಮಂತ್ರಿಗಳು ದಲಿತರು, ಸಮಾಜ ಕಲ್ಯಾಣ ಮಂತ್ರಿಗಳು ದಲಿತರು, ರಾಜ್ಯದ ಅಧಿಕಾರದಲ್ಲಿದ್ದರೂ ಕೂಡ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲ. ಇತ್ತೀಚಿಗೆ ಯಾದಗಿರಿ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ನಡೆದ ಘಟನೆಗಳಿಗೆ ದಲಿತ ಮಂತ್ರಿಗಳು ಯಾವುದೇ ಪ್ರತಿಕ್ರಿಯೇ ನೀಡುತ್ತಿಲ್ಲ. ಕಳೆದ 15 ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ, ಕೊಡೆಕಲ್ ಗ್ರಾಮದಲ್ಲಿ ಮಾದಿಗ ಸಮುದಾಯದ 15ನೇ ವಯಸ್ಸಿನ ಅಪ್ರಾಪ್ತ ಬಾಲಕೀಯರ ಮೇಲೆ ಅತ್ಯಚಾರವಾಗಿ, ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿ, 15 ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.
ಅತ್ಯಚಾರ ಮಾಡಿದ ಆರೋಪಿಗಳಿಗೆ ಜೀವವಧಿ ಶಿಕ್ಷೆ ನೀಡಬೇಕು ಹಾಗೂ ಆ ಗ್ರಾಮಗಳಲ್ಲಿ ಮಾದಿಗ ಸಮುದಾಯದ ಕುಟುಂಬಗಳನ್ನು ಬಹಿಷ್ಕಾರ ಮಾಡಿದವರನ್ನು ಎಸ್.ಸಿ., ಎಸ್.ಟಿ. ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಅಮಾನತ್ತು ಮಾಡಲು ಒತ್ತಾಯಿಸಿ.
ಇದೇ ವಿಚಾರಕ್ಕೆ ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತ ವಿರುದ್ಧ ಸೆಪ್ಟಂಬರ್ 30ರಂದು ಯಾದಗಿರಿ ಬಂದ್ ಕರೆ ನೀಡಲಾಗಿದೆ. ರಾಯಚೂರು ಜಿಲ್ಲೆಯ ಮಾದಿಗ ದಂಡೋರ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಹಾಗು ಬುದ್ದಿಜೀವಿಗಳು ಬಂದ್ ನಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.