This is the title of the web page
This is the title of the web page
Politics News

ಸಿಲಿಂಡರ್ ದರ ಮತ್ತೆ 50 ಏರಿಕೆ : ಕಾಂಗ್ರೆಸ್ ಅಸಮಾಧಾನ


K2 ಪೊಲಿಟಿಕಲ್ ನ್ಯೂಸ್: ಮೋದಿಯವರು ಒಮ್ಮೆ ಕೈಬೀಸಿ ಹೋದರೆಂದರೆ ಜನತೆ ಬರೆ ಎಳೆದು ಹೋದರು ಎಂದೇ ಅರ್ಥ ಎಂಬ ಬಗ್ಗೆ ಅಸಮಾಧಾನ ಹೊರಹಾಕಿದ ಕಾಂಗ್ರೆಸ್, ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಸಾಮಾನ್ಯ ಜನರಿಗೆ ಶಾಕ್ ನೀಡಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದೆ.

ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಮೋದಿಯವರು ಒಮ್ಮೆ ಕೈಬೀಸಿ ಹೋದರೆಂದರೆ ಜನತೆ ಬರೆ ಎಳೆದು ಹೋದರು ಎಂದೇ ಅರ್ಥ. ಗೃಹಬಳಕೆಯ ಸಿಲಿಂಡರ್ ದರ ಮತ್ತೆ 50 ಏರಿಕೆಯಾಗಿದೆ. ಮೋದಿಜಿಯ ಅಚ್ಛೆ ದಿನಗಳಲ್ಲಿ ಜನರು ಕಾಡುಮೇಡು ಅಲೆದು ಗೆಡ್ಡೆಗೆಣಸು ತಿಂದು ಬದುಕುವ ಹಂತಕ್ಕೆ ಬರುವುದು ನಿಶ್ಚಿತ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಈ ಅಮಾನವೀಯ ಬೆಲೆ ಏರಿಕೆಯಲ್ಲಿ ನೆರವು ನೀಡಲೆಂದೇ ನಮ್ಮ ಗೃಹ ಲಕ್ಷ್ಮಿ ಯೋಜನೆ ಘೋಷಿಸಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹350 ಏರಿಕೆ, ಗೃಹಬಳಕೆಯ ಸಿಲಿಂಡರ್ ಬೆಲೆ ₹50 ಏರಿಕೆಯಾಗಿದೆ. ಅಚ್ಛೆ ದಿನಗಳಲ್ಲಿ ಅನ್ನ ಬೇಯಿಸಿ ತಿನ್ನುವುದೂ ಕೂಡ ಐಷಾರಾಮಿ ಜೀವನ ಎನ್ನುವ ಸ್ಥಿತಿಗೆ ತಂದಿಟ್ಟಿದ್ದಕ್ಕೆ ಧನ್ಯವಾದ ಮೋದಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಮೊದಲು ಹೊಗೆಯಿಂದ ಕಣ್ಣೀರು ಬರ್ತಿತ್ತು, ಈಗ ಸಿಲಿಂಡರ್ ಕೂಡ ಕಣ್ಣೀರು ತರಿಸುತ್ತಿದೆ ಅಲ್ಲವೇ ಎಂದು ಬಿಜೆಪಿಯನ್ನ ಕಾಂಗ್ರೆಸ್ ಪ್ರಶ್ನಿಸಿದೆ.


[ays_poll id=3]