K2kannadanews.in
Crime News ಮಸ್ಕಿ : ಬೆಳ್ಳಂ ಬೆಳಿಗ್ಗೆ ಹೋಟೆಲ್ ಒಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ಹೋಟೆಲ್ ನಲ್ಲಿ ಇದ್ದ ಹದಿನೈದಕ್ಕೂ ಹೆಚ್ಚು ಜನ ಅದೃಷ್ಟವಶಾತ್ ಪಾರಾದ ಘಟನೆ ಎಸ್ ಬುದ್ದಿನ್ನಿ ಗ್ರಾಮದಲ್ಲಿ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಎಸ್ ಬುದ್ದಿನ್ನಿ ಗ್ರಾಮದಲ್ಲಿ ವೀರಯ್ಯಸ್ವಾಮಿ ಯವರ ಜನಸ್ನೇಹಿ ಹೊಟೇಲ್ ನಲ್ಲಿ ಆಕಸ್ಮಿಕ ಸಿಲಿಂಡರ್ ಸ್ಪೋಟವಾಗಿ ಭಾರಿ ಅನಾಹುತ ತಪ್ಪಿದೆ, ವೀರಯ್ಯಸ್ವಾಮಿ ಯವರು ಎಂದಿನಂತೆ ದಿನನಿತ್ಯ ತಮ್ಮ ಹೊಟೇಲ್ ನಲ್ಲಿ ಬೆಳಿಗ್ಗೆ ವಗ್ಗರಣಿ,ಮಿರ್ಚಿ ಮಾಡಿದ್ದಾರೆ ಅನೇಕರು ವಗ್ಗರಣಿ ಮಿರ್ಚಿ ತಿಂದು ಹೋಗಿದ್ದರೆ, ಆದರೆ ದುರದೃಷ್ಟವಶಾತ್ ಏಕಾಏಕಿ ಎನೊ ವ್ಯತ್ಯಾಸ ಆಗಿ ಸಿಲಿಂಡರ್ ಸ್ಪೋಟ ಸಂಭವಿಸಿದಾಗ ಹೊಟೇಲ್ ನಲ್ಲಿ ಹತ್ತುರಿಂದ ಹದಿನೈದು ಜನ ಇದ್ದರೂ ಘಟನೆ ನೋಡಿತ್ತಿದ್ದಂತೆ ಎಲ್ಲರೂ ಪಾರಾಗಿ ಸುರಕ್ಷಿತವಾಗಿ ಹೋರಗಡೆ ಬಂದಿದ್ದಾರೆ.
ಸ್ವತಃ ಗ್ರಾಮಸ್ಥರು ಸೇರಿ ಬೆಂಕಿಯನ್ನು ಆರಿಸುವ ಕೆಲಸ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇದರಿಂದ ಬಡವರಾದ ವೀರಯ್ಯಸ್ವಾಮಿ ಯವರು ಮೂಲತಃ ಹೊಟೇಲ್ ನಿಂದ ಜೀವನ ಸಾಗಿಸುತ್ತಿದ್ದರು. ಆದರೆ ಆಕಸ್ಮಿಕ ಸಂಭವಿಸಿದ ಸ್ಪೋಟದಿಂದ ಬಹಳಷ್ಟು ಮನನೊಂದಿದ್ದು , ಹೊಟೇಲ್ ಲ್ಲಿ ಅಂದಾಜು ಒಂದರಿಂದ ಒಂದುವರೆ ಲಕ್ಷ ರೂಪಾಯಿ ಬೆಲೆ ಬಾಳುವ ಕಿರಾಣಿ, ಇನ್ನಿತರ ವಸ್ತುಗಳ, ಹಾಗೆ ಹನ್ನೆರಡು ಸಾವಿರ ರೂಪಾಯಿ ನಗದು ಹಣ ಇಟ್ಟಿದ್ದರು ಆದರೆ ಇದೆಲ್ಲವು ಸಿಲಿಂಡರ್ ಸ್ಪೋಟಕ್ಕೆ ಸುಟ್ಟು ಕರಕಲಾದ ಘಟನೆ ನಡೆದಿದ್ದು ಅದಕ್ಕೆ ವೀರಯ್ಯಸ್ವಾಮಿ ಯವರು ಈ ಸಿಲಿಂಡರ್ ಸ್ಪೋಟ ಆಕಸ್ಮಿಕ ಸಂಭವಿಸಿದ ಘಟನೆಗೆ ಸರಕಾರದಿಂದ ಸಹಾಯ ಮಾಡಬೇಕೆಂದು ತಮ್ಮ ಅಳಲನ್ನು ಹಂಚಿಕೊಂಡರು.