
K2 ಹೆಲ್ತ್ ಟಿಪ್ : ಪ್ರಸ್ತುತ ದಿನದಲ್ಲಿ ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲಿಲ್ಲದ ಕಸರತ್ತುಗಳನ್ನು ಮಾಡುತ್ತೇವೆ. ಹಿರಿಯರು ಹೇಳುವಂತೆ ಅಡುಗೆ ಮನೆಯಲ್ಲಿ ಅಡಗಿದೆ ಆರೋಗ್ಯ ಎಂಬ ಮಾತಿನಂತೆ ಹೆಚ್ಚಿನ ಬಿಟಮಿನ್ ಗಳು ಸಿಗುವಂತಹ ಕರಿಬೇವಿನ ಲಾಭ ಗೊತ್ತಾ ನಿಮಗೆ.
ಸಿವೆ, ಕರಿಬೇವು ಇಲ್ಲದ ಒಗ್ಗರಣೆ ಒಗ್ಗರಣೆಯೇ ಅಲ್ಲ. ದಕ್ಷಿಣ ಭಾರತೀಯರ ಬಹುತೇಕ ಅಡುಗೆಗಳಲ್ಲಿ ಕರಿಬೇವಿಗೆ ಖಾಯಂ ಸ್ಥಾನ. ಆದರೆ ಈ ಖಾಯಂ ಸ್ಥಾನ ಕೇವಲ ಅಡುಗೆ ಮಾಡಿದ ಪಾತ್ರೆಯಲ್ಲಷ್ಟೇ. ಊಟದ ತಟ್ಟೆಗೆ ಕರೀಬೇವು ಬಂದಕೂಡಲೇ ಅದನ್ನು ತೆಗೆದು ಹೊರಗೆ ಇಡುವವರೇ ಹೆಚ್ಚು. ಕರಿಬೇವಿನಲ್ಲಿ ಹೇರಳವಾಗಿ ವಿಟಮಿನ್ ಎ ಬಿ ಸಿ ಹಾಗೂ ಬಿ12 ಇದೆ. ಇದು ಕ್ಯಾಲ್ಷಿಯಂ ಹಾಗೂ ಕಬ್ಬಿಣಾಂಶಗಳ ಆಗರ.
ಕರಿಬೇವು ಒಗ್ಗರಣೆಗೆ ಅಷ್ಟೇ ಅಲ್ಲದೇ ಚಟ್ನಿಯ ರೂಪದಲ್ಲಿ ಬಳಸುತ್ತಾರೆ. ಆದರೆ ಪ್ರತಿನಿತ್ಯ ಕರಿಬೇವನ್ನು ನಿಯಮಿತವಾಗಿ ಬಳಸಲು ಒಂದು ಸುಲಭ ಉಪಾಯ ಇದೆ. ಒಂದು ಕಂತೆ ಕರಿಬೇವನ್ನು ಕೊಂಡುಕೊಂಡಾಗ ಅದನ್ನ ಚೆನ್ನಾಗಿ ತೊಳೆದು, ಎಲೆಗಳನ್ನು ಬಿಡಿಸಿ, ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ, ಪ್ರತಿ ನಿತ್ಯ ಸುಮಾರು ಒಂದು ಚಮಚದಷ್ಟು ಕರಿಬೇವಿನ ಪುಡಿಯನ್ನು ಸಾಂಬಾರ್ ಗೆ ಹಾಕಿ. ಹೀಗೆ ಮಾಡಿದಾಗ ಕರಿಬೇವನ್ನು ತೆಗೆದು ಪಕ್ಕಕ್ಕೆ ಇಟ್ಟು ತಿನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
![]() |
![]() |
![]() |
![]() |
![]() |
[ays_poll id=3]