
ಸಿರವಾರ: ಮಾನವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರಾದ ಸ್ಯಾಮುವೇಲಪ್ಪ ಹಾಗೂ ಗುತ್ತಿಗೆದಾರರನ್ನು ಸಾರ್ವಜನಿಕವಾಗಿ ಅವಾಚ್ಛ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರ ಮೇಲೆ ಹಲ್ಲೆಗೆ ಮುಂದಾಗಿರುವುದು ಖಂಡನೀಯ. ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ತಾಲೂಕಿನಲ್ಲಿ ಪಾಳೇಗಾರಿಗೆ ಪದ್ಧತಿ ಅನುಸರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಲೋಕೋಪಯೋಗಿ ಇಲಾಖೆಯ ಜೆ.ಇ ಸ್ಯಾಮುವೇಲಪ್ಪ ಅವರಿಗೆ ರಕ್ಷಣೆ ನೀಡಬೇಕಿದೆ ಎಂದು ಎಂ.ಆರ್.ಹೆಚ್.ಎಸ್ ಜಿಲ್ಲಾಧ್ಯಕ್ಷ ಜೆ.ಅಬ್ರಾಹಂ ಹೊನ್ನಟಗಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಾಲೂಕಿನ ಕವಿತಾಳ ಪಟ್ಟಣದಲ್ಲಿ ಡಿವೈಡರ್ ಕಾಮಗಾರಿಯ ವೀಕ್ಷಣೆಗೆ ತೆರಳಿದಾಗ ಶಾಸಕರು ವಿನಾಕಾರಣ ಜೆ.ಇ ಸ್ಯಾಮುವೇಲಪ್ಪ ಹಾಗೂ ಗುತ್ತಿಗೆದಾರರ ಮೇಲೆ ಗರಂ ಆಗಿ ಅವರ ಜೇಬಿನಲ್ಲಿದ್ದ ಚಸ್ಮಾ, ಮೊಬೈಲ್ ಕಿತ್ತು ಎಸೆದು ಅವಾಚ್ಛ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಶಾಸಕರು ಕೇವಲ ದಲಿತ ಸಮುದಾಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ತುಳಿಯುವ ಪ್ರಯತ್ನ ಮಾಡುತ್ತಿರುವುದು ಶೋಚನೀಯ. ಶಾಸಕರು ಹೀನ ಕೃತ್ಯಕ್ಕೆ ಕೈ ಹಾಕಿ, ತಮ್ಮ ಅಧಿಕಾರದಲ್ಲಿ ಗೂಂಡಾ ವರ್ತನೆ ತೋರುತ್ತಿರುವುದು ಅಸಮಂಜಸವಾದದ್ದು ಎಂದರು. ಶಾಸಕರು ಕೂಡಲೇ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಯಪ್ಪ ಕೆಂಪು, ಎಮ್.ಆರ್. ಹೆಚ್.ಎಸ್ ತಾಲ್ಲೂಕು ಅಧ್ಯಕ್ಷ ಚನ್ನಪ್ಪ ಬೂದಿನಾಳ, ಡೇವಿಡ್, ಹನುಮಂತ, ಮೇಶಾಕ್, ಹುಲಿಗೆಪ್ಪ, ಬಸವರಾಜ ಇದ್ದರು.
![]() |
![]() |
![]() |
![]() |
![]() |
[ays_poll id=3]