K2kannadanews.in
Crocodile ರಾಯಚೂರು : ಬೆಳ್ಳಂಬೆಳಗ್ಗೆ (Early morning) ರಾಯಚೂರು ನಗರದ ಮಾವಿನಕೆರೆಯಲ್ಲಿ (Lake) ಮೊಸಳೆ (crocodile) ಪ್ರತ್ಯಕ್ಷವಾಗಿ ಸ್ಥಳೀಯರನ್ನ ಆತಂಕ ಮೂಡಿಸಿದ ಘಟನೆ ನಡೆದಿದೆ.
ಹೌದು ರಾಯಚೂರು (Raichur) ನಗರದ ಇಂದ್ರಾನಗರ ಮತ್ತುಗೋಲ್ ಮಾರ್ಕೆಟ್ ಬಡಾವಣೆ ಮಧ್ಯದಲ್ಲಿ ಇರುವಂತಹ ಸ್ಥಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಮೊಸಳೆಯನ್ನ ನೋಡಲು ಜನ ಸರಸಿಯಲ್ಲಿ ಬರುತ್ತಿದ್ದಾರೆ. ಮೊಸಳೆ ಪ್ರತ್ಯಕ್ಷವಾಗಿದ್ದು ಇನ್ನೊಂದು ಕಡೆ ಜನರಲ್ಲಿ ಆತಂಕ ಮೂಡಿಸಿದೆ. ಗಾತ್ರದಲ್ಲಿ ಚಿಕ್ಕದಾದರೂ ಕೂಡ ಮುಂದಿನ ದಿನಗಳಲ್ಲಿ ಮನೆಗೆ ನುಗ್ಗಿದರೆ ಏನು ಮಾಡಬೇಕು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಿಯರಿಂದ ಮಾಹಿತಿ ಪಡೆದಿದ್ದು, ಇದೀಗ ಮೊಸಳೆಯನ್ನು ಹಿಡಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅರಣ್ಯ ಅಧಿಕಾರಿ ರಾಜೇಶ್ ನೇತೃತ್ವದ ತಂಡ ಮತ್ತು ಸ್ಥಳೀಯ ಹಾಗೂ ಹಿಡಿಯುವ ತಂಡದೊಂದಿಗೆ ಮೊಸಳೆಹಿಡಿಯುವ ಕಾರ್ಯ ಯೋಜನೆ ಮಾಡುತ್ತಿದ್ದಾರೆ.