This is the title of the web page
This is the title of the web page
State News

ರಾಜಕೀಯಕ್ಕಾಗಿ ಗಡಿಯಾಚೆ ಸಮಸ್ಯೆ ಸೃಷ್ಟಿ : ಶೀಘ್ರವೇ ವಿಶ್ವ ಕನ್ನಡ ಸಮ್ಮೇಳನ


K2 ನ್ಯೂಸ್ ಡೆಸ್ಕ್: ರಾಜಕೀಯ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ಗಡಿ ಸಮಸ್ಯೆ ಸೃಷ್ಟಿ ಮಾಡಲಾಗುತ್ತಿದೆ. ಕರ್ನಾಟಕ ಎಂದೂ ಗಡಿ ಸಮಸ್ಯೆ ಸೃಷ್ಟಿಸಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕನ್ನಡದಲ್ಲಿ ಪ್ರಾಮಾಣಿಕತೆ, ಒಳ್ಳೆಯತನ ಇದೆ. , ಕನ್ನಡದ ಸಾಕ್ಷಿ ಪ್ರಜ್ಞೆ ಮಾನವೀಯತೆಯಿಂದ ಕೂಡಿರುವಂಥದ್ದು. ಕನ್ನಡದ ಪುರಂದರದಾಸರು, ಅಲ್ಲಮಪ್ರಭು, ಬಸವಣ್ಣ, ಅವರಿಂದ ಹರಿದುಬರುವ ಜ್ಞಾನದ ಭಂಡಾರ ಕನ್ನಡಿಗರನ್ನು ಬೆಳೆದಿದೆ. ಹಿಂದಿನವರು ಇದನ್ನು ನಮಗೆ ಕೊಟ್ಟಿದ್ದಾರೆ. ನಮ್ಮ ಕರ್ತವ್ಯ ಇದನ್ನು ಇನ್ನಷ್ಟು ಉತ್ಕೃಷ್ಟಗೊಳಿಸಿ ಬಿಟ್ಟುಕೊಡಬೇಕು. ಅದ್ಭುತ ರಂಗಮಂದಿರವನ್ನು ನಿರ್ಮಿಸಲಾಗಿದೆ.

ಗಡಿ ಭಾಗದ ಅಭಿವೃದ್ಧಿ : ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು. ಗಡಿಯಾಚೆಗಿನ ಕನ್ನಡ ಶಾಲೆಗಳ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುವುದು. ಈಗಾಗಲೇ 100 ಕೋಟಿ ರೂ.ಗಳನ್ನು ಗಡಿ ಭಾಗದ ಅಭಿವೃದ್ಧಿಗೆ ನೀಡಲಾಗಿದೆ. ಕೆಲವೇ ದಿನಗಲ್ಲಿ ಗಡಿ ಭಾಗದಲ್ಲಿ ಏನಾಗಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸೂಚಿಸಿದರೆ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.

ಸ್ವರ್ಗದ ದರ್ಶನ : ಗಡಿಯಾಚೆ ಇತ್ಯರ್ಥವಾದ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. ರಾಜಕೀಯವಾಗಿ ಗಡಿಯಾಚೆ ಸಮಸ್ಯೆ ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ ಯಾವತ್ತೂ ಹಾಗೆ ಮಾಡಿಲ್ಲ. ಕನ್ನಡಕ್ಕೆ ಗಟ್ಟಿಯಾಗಿ ಎದ್ದು ನಿಲುವುದು ಕನ್ನಡಿಗರಿಗೆ ರಕ್ಷಣೆ ಸದಾ ಕಾಲ ಮಾಡಿಕೊಂಡು ಬಂದಿದ್ದೇವೆ. ಯಾರೂ ಅರ್ಜಿ ಕೊಟ್ಟು ಹುಟ್ಟಲು ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದವರು ಕನ್ನಡಿಗರೇ. ಇವು ಕಟು ಸತ್ಯ. ಸತ್ಯದ ಮಾರ್ಗ ಅನುಸರಿಸಿದಾಗ ಸ್ವರ್ಗದ ದರ್ಶನವಾಗುತ್ತದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದನ್ನು ಅಕ್ಷರಶಃ ಪಾಲನೆ ಮಾಡಬೇಕು ಎಂದರು.

ಕನ್ನಡಕ್ಕೆ ಅಂತರ್ಗತ ಶಕ್ತಿ : ಕನ್ನಡ ದಿನನಿತ್ಯ ಬಳಕೆ ಮಾಡಿದರೆ ಉಳಿಯುತ್ತದೆ. ಕನ್ನಡಕ್ಕೆ ಅಂತರ್ಗತ ಶಕ್ತಿ ಇದೆ. ಕನ್ನಡವನ್ನು ಅಳಿ ಸಲು ಈ ಭೂಮಿಯ ಮೇಲಿನ ಯಾವುದೇ ಶಕ್ತಿಗೂ ಇಲ್ಲ. ಶಕ್ತಿ ಶಾಲಿ ಭಾಷೆ. ಹಿನ್ನಡೆಯಾದರೆ ಅದು ನಮ್ಮಿಂದಾಗಬೇಕು, ಕನ್ನಡ ಭಾಷೆಯ ಶಕ್ತಿ ಬಳಕೆ ಮಾಡಿದರೆ ಕನ್ನಡವೂ ಬೆಳೆದು ನಾವೂ ಬೆಳೆಯುತ್ತೇವೆ. ಕನ್ನಡ ಭಾಷೆ ಗೆ ಆತಂಕವಿಲ್ಲ. ಕನ್ನಡ ಶ್ರೀಮಂತ ಭಾಷೆಯಾಗಿದ್ದು ಬಳಸಿದಷ್ಟೂ ನಮ್ಮನ್ನು ಶಕ್ತಿ ಶಾಲಿಯಾಗಿಸುತ್ತದೆ. ಸಕಾರಾತ್ಮಕ ವಾಗಿ ಮುಂದುವರೆದಾಗ ನಮಗೆ, ಕನ್ನಡಕ್ಕೆ ಉತ್ತಮ ಭವಿಷ್ಯವಿದೆ. ಸಾಧನೆ ಕನ್ನಡದಿಂದ ಇದೆ ಎಂದು ಮರೆಯಬೇಡಿ ಎಂದರು.


[ays_poll id=3]