ಲೊಕಾ ಚುನಾವಣೆ : ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಆರಂಭ..

K 2 Kannada News
ಲೊಕಾ ಚುನಾವಣೆ : ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಕಾರ್ಯ ಆರಂಭ..
WhatsApp Group Join Now
Telegram Group Join Now

K2kannadanews.in

Political news ರಾಯಚೂರು : ಲೋಕಸಭಾ ಚುನಾವಣೆಯ ‌ಮತ ಎಣಿಕೆ ಹಿನ್ನೆಲೆ ರಾಯಚೂರು ನಗರದ ಎಲ್ ವಿಡಿ ಕಾಲೇಜಿನಲ್ಲಿ ಮತದಾನ ಎಣಿಕೆಗೆ ಸಕಲ ಸಿದ್ದತೆ ಮಾಡಿದ್ದು, ಸುಮಾರು 21 ರೌಂಡ್ಸ್ ಗಳಲ್ಲಿ ‌ನಡೆಯಲಿದೆ ಮತ ಎಣಿಕೆ ನಡೆಯಲಿದೆ.

8 ವಿಧಾನಸಭಾ ಕ್ಷೇತ್ರದ ಮತಗಳು ಪ್ರತ್ಯೇಕವಾಗಿ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಒಂದು ವಿಧಾನಸಭಾ ಕ್ಷೇತ್ರದ ಮತಗಳು 14 ಟೇಬಲ್ ನಲ್ಲಿ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಟೇಬಲ್ ಗೆ ನಾಲ್ಕು ಜನ ಸಿಬ್ಬಂದಿ ನಿಯೋಜನೆ. 2,203 ಮತಗಟ್ಟೆಗಳಲ್ಲಿ ಚಲಾವಣೆ ಆದ 12,99,803 ಮತಗಳ ಎಣಿಕೆ ಮಾಡಲಾಗುತ್ತದೆ. ಮತ ಎಣಿಕೆ ಮೇಲ್ವಿಚಾರಕರು, ಮೈಕ್ರೋ ಅಬ್ಸರ್ವರ್ ಹಾಗೂ ಇಬ್ಬರು ಎಣಿಕೆ ಸಹಾಯಕರ ನೇಮಕ. ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 486 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಒಟ್ಟು 8 ವಿಧಾನಸಭಾ ಕ್ಷೇತ್ರದ 161 ಸುತ್ತುಗಳಲ್ಲಿ ‌ನಡೆಯಲಿದೆ ಮತ ಎಣಿಕೆಯಾಗಲಿದೆ.

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರು ಮೊದಲು ಇಟಿಪಿಬಿ ಮತ್ತು ಅಂಚೆ ಮತಗಳ ಎಣಿಕೆ ಕಾರ್ಯ. 30 ನಿಮಿಷಗಳ ಬಳಿಕ ಇವಿಎಂ ಮತಗಳ ಎಣಿಕೆ. ಮತ ಎಣಿಕೆಗೆ ಒಬ್ಬ ಅಭ್ಯರ್ಥಿ 8 ವಿಧಾನಸಭಾ ಕ್ಷೇತ್ರ ಸೇರಿ 123 ಏಜೆಂಟ್ ರನ್ನ ನೇಮಿಸಲು ಅನುಮತಿ. ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 317 ಮತಗಟ್ಟೆಗಳ 23 ಸುತ್ತಿನಲ್ಲಿ ಮತ ಎಣಿಕೆಗೆ ಸಿದ್ಧತೆ. ಶಹಾಪುರ ವಿಧಾನಸಭಾ ಕ್ಷೇತ್ರದ 265 ಮತಗಟ್ಟೆಗಳ ಮತಗಳು 19 ಸುತ್ತಿನಲ್ಲಿ ಎಣಿಕೆ. ಯಾದಗಿರಿ ವಿಧಾನಸಭಾ ಕ್ಷೇತ್ರದ 268 ಮತಗಟ್ಟೆಗಳಲ್ಲಿನ  ಮತಗಳು ‌20 ಸುತ್ತಿನಲ್ಲಿ ಎಣಿಕೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ 275 ಮತಗಟ್ಟೆಗಳ ‌ಮತಗಳು 20 ಸುತ್ತಿನಲ್ಲಿ ಎಣಿಕೆ ರಾಯಚೂರು ನಗರದ 250 ಬೂತ್ ಗಳ ಮತಗಳು 18 ಸುತ್ತಿನಲ್ಲಿ ‌ಎಣಿಕೆಮಾನ್ವಿ ವಿಧಾನಸಭಾ ಕ್ಷೇತ್ರದ 276 ಮತಗಟ್ಟೆಗಳ ಮತಗಳು ‌20 ಸುತ್ತಿನಲ್ಲಿ ಎಣಿಕೆ, ದೇವದುರ್ಗ ವಿಧಾನಸಭಾ ಕ್ಷೇತ್ರದ 265 ಮತಗಟ್ಟೆಗಳಲ್ಲಿನ  ಮತಗಳು 20 ಸುತ್ತಿನಲ್ಲಿ ಎಣಿಕೆ, ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ 285 ಮತಗಟ್ಟೆಗಳ ಮತಗಳು 21 ಸುತ್ತಿನಲ್ಲಿ ಎಣಿಕೆಯಾಗಲಿದೆ.

WhatsApp Group Join Now
Telegram Group Join Now
Share This Article