ದೇವದುರ್ಗ ತಾಲ್ಲೂಕಿನಲ್ಲಿ ನಕಲಿ ನೋಟು ಹಾವಳಿ : ಔಷದ ಅಂಗಡಿಲಿ ನಕಲಿ ನೋಟು..

K 2 Kannada News
ದೇವದುರ್ಗ ತಾಲ್ಲೂಕಿನಲ್ಲಿ ನಕಲಿ ನೋಟು ಹಾವಳಿ : ಔಷದ ಅಂಗಡಿಲಿ ನಕಲಿ ನೋಟು..
Oplus_131072
WhatsApp Group Join Now
Telegram Group Join Now

K2kannadanews.in

fake note ಜಾಲಹಳ್ಳಿ : ಔಷದ ಅಂಗಡಿಯಲ್ಲಿ (Medical shop) 500 ಮುಖಬೆಲೆಯ (fake note) ನಕಲಿ ನೋಟು ಕಂಡುಬಂದಿದ್ದು, ಇದರ ಹಾವಳಿಯಿಂದ ವ್ಯಾಪಾರಸ್ಥರು (Merchants) ಬೇಸತ್ತು ಹೋಗಿದ್ದಾರೆ. ಸ್ಥಳೀಯ ಎಸ್.ಬಿ.ಐ (SBI) ಬ್ಯಾಂಕ್ ನಲ್ಲಿ ಹಣ ತುಂಬಲು ಹೋದಾಗ ನಕಲಿ ಎಂದು ಗೊತ್ತಾಗಿದೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಜಾಲಹಳ್ಳಿ (Jalahalli) ಪಟ್ಟಣದಲ್ಲಿ ಘಟನೆ ಜರುಗಿದೆ. ಜನದಟ್ಟಣೆ (rushed place) ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು (Target) ಖೋಟಾನೋಟುಗಳನ್ನು ಅಕ್ರಮವಾಗಿ ಚಲಾವಣೆ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಜಾಲಹಳ್ಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ (Village) ಕೂಡ ನಕಲಿ ನೋಟುಗಳ (Fake note problem) ಹಾವಳಿ ಮಿತಿ ಮೀರಿದೆ.

ದಿನಕ್ಕೆ ದುಡಿಯುವುದೇ 300 ರೂಪಾಯಿ,‌ ಈ ವೇಳೆ 500 ರೂ ಒಂದು ಖೋಟಾ ನೋಟು ಬಂದರೆ, ನಮ್ಮ ಬಂಡವಾಳದ ಜೊತೆಗೆ ಲಾಭವೂ (profit) ಕಳೆದುಕೊಳ್ಳಬೇಕು ಎಂಬುದು ವ್ಯಾಪಾರಸ್ಧರ ಅಳಲಾಗಿದೆ. ದುಡಿದ ಹಣ ಬ್ಯಾಂಕಿಗೆ ಜಮಾ ಮಾಡುವ‌ ವೇಳೆ, ನೋಟು ಎಣಿಕೆ ಮಾಡುವ ಯಂತ್ರಕ್ಕೆ‌ (Mation) ಹಾಕಿದಾಗ ನಕಲಿ ಎಂದು ಗೊತ್ತಾಗಿದೆ. ಬ್ಯಾಂಕ್‌ನವರು ಅದರ ಮೇಲೆ ಕೆಂಪು ಬಣ್ಣದ ಪೆನ್‌ನಿಂದ ಎರಡು ಗೆರೆ ಎಳೆದು ನಕಲಿ ಎಂದು ಬರೆದು ಹಣ ತುಂಬಲು ಬಂದಿರುವ ವ್ಯಕ್ತಿಗೆ ಮರಳಿ ನೀಡಿ ಕಳಿಸಿದ್ದಾರೆ.

WhatsApp Group Join Now
Telegram Group Join Now
Share This Article