K2kannadanews.in
Honey trap ಬೆಂಗಳೂರು : ಆರ್ ಆರ್ ನಗರ ಶಾಸಕ ಮುನಿರತ್ನ ಅವರು ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಜೈಲು ಸೇರಿ ಷರತ್ತು ಬದ್ದ ಜಾಮೀನಿನ ಮೇಲೆ ಹೊರಬಂದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ, ನರಮೇಧ ಪ್ರಕರಣ, ಏಡ್ಸ್ ಪೀಡಿತೆಯನ್ನು ಬಳಸಿಕೊಂಡು ಹನಿಟ್ರ್ಯಾಪ್ ಆರೋಪ ಕೂಡ ಕೇಳಿಬಂದಿದೆ.
ಏಡ್ಸ್ ಪೀಡಿತೆಯನ್ನು ಬಳಸಿಕೊಂಡು ಮುನಿರತ್ನ, ತನ್ನ ಎದುರಾಳಿ ಕಾರ್ಪೊರೇಟರ್ ನ ಹನಿಟ್ರ್ಯಾಪ್ ಮಾಡಿದ್ದಾರೆ. ಮುನಿರತ್ನ ವಿರುದ್ಧ ದೂರು ನೀಡಿರುವ ಸಂತ್ರಸ್ತೆ ಈ ವಿಚಾರವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಕೋವಿಡ್ ಸಂದರ್ಭದಲ್ಲಿ ಮಾಸ್ಕ್ ಹಂಚುವಾಗ ಸಂತ್ರಸ್ತೆಯ ಪರಿಚಯವಾಗಿದ್ದು, ಬಳಿಕ ನಂಬರ್ ಪಡೆದ ಮುನಿರತ್ನ, ಮೆಸೆಜ್ ಮಾಡಲು ಆರಂಭಿಸಿದ್ದರಂತೆ. ಬಳಿಕ ಸಂತ್ರಸ್ತೆಯನ್ನು ತನ್ನ ಅಪಾರ್ಟ್ ಮೆಂಟ್ ಗೆ ಕರೆಸಿ ಅತ್ಯಾಚಾರವೆಸಗಿದ್ದರಂತೆ. ಮಹಿಳೆ ವಿರೋಧಿಸಿದ್ದಕ್ಕೆ ಜನರನ್ನು ಕರೆಸಿ ನಿನ್ನ ವಿರುದ್ಧ ಆರೋಪ ಮಾಡುತ್ತೇನೆ ಎಂದು ಬೆದರಿಸಿದ್ದಲ್ಲದೇ, ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡುವುದಾಗಿ ಬೆದರಿಸಿದ್ದರಂತೆ.
ಈ ಘಟನೆ ಬಳಿಕ ಆರ್.ಆರ್,ನಗರ ಕಾರ್ಪೊರೇಟರ್ ಪತಿಯನ್ನು ಹನಿಟ್ರ್ಯಾಪ್ ಮಾಡಬೇಕು ಎಂದು ಮುನಿರತ್ನ ಒತ್ತಾಯಿಸಿದ್ದರಂತೆ. ಆದರೆ ಸಂತ್ರಸ್ತೆ ಇದಕ್ಕೆ ಒಪ್ಪದಿದ್ದಾಗ ಬೇರೆ ಮಹಿಳೆಯನ್ನು ಕಳುಹಿಸುತ್ತೇನೆ. ಆತನಿಗೆ ಪರಿಚಯ ಮಾಡಿಸು ಎಂದಿದ್ದರಂತೆ. ಇದಕ್ಕೆ ಸಂತ್ರಸ್ತೆ ಒಪ್ಪಿದಾಗ ಮುನಿರತ್ನ ಅವರ ಅಪಾರ್ಟ್ ಮೆಂಟ್ ನಲ್ಲಿಯೇ ಮುನಿರತ್ನ ಕಳುಹಿಸಿದ್ದ ಮಹಿಳೆಯನ್ನು ಕಾರ್ಪೊರೇಟರ್ ಪತಿಯ ಜೊತೆ ಬಿಟ್ಟಿದ್ದಾಗಿ ಹೇಳಿದ್ದಾಳೆ. ಮುನಿರತ್ನ ಈ ಅಪಾರ್ಟ್ ಮೆಂಟ್ ಗೆ ಕ್ಯಾಮರಾ ಫಿಕ್ಸ್ ಮಾಡಿ ಅದನ್ನು ತನ್ನ ಕಚೇರಿಯಲ್ಲಿ ಕುಳಿತು ಲೈವ್ ನೋಡುತ್ತಿದ್ದರು. ಇದನ್ನೆಲ್ಲ ರೆಕಾರ್ಡ್ ಮಾಡಿಕೊಂಡಿದ್ದ ಶಾಸಕ ಬಳಿಕ ಥ್ಯಾಕ್ಸ್ ಎಂದು ಹೇಳಿ, ನೀನು ಕಾರ್ಪೊರೇಟರ್ ಪತಿಯ ಬಳಿ ಕಳುಹಿಸಿದ ಮಹಿಳೆಗೆ ಏಡ್ಸ್ ಇದೆ ಎಂದು ಹೇಳಿದ್ದರಂತೆ. ಳಿಕ ಆ ಮಹಿಳೆಯನ್ನು ಕಾಪೊರೇಟರ್ ಮಗನಿಗೂ ಪರಿಚಯಿಸಬೇಕು. ಇಲ್ಲವೇ ಏಡ್ಸ್ ಇಂಜಕ್ಷನ್ ನೀಡಬೇಕು ಎಂದು ಬೆದರಿಸುತ್ತಿದ್ದರಂತೆ. ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.