
K2 ನ್ಯೂಸ್ ಡೆಸ್ಕ್ : ಪ್ರಪಂಚದಲ್ಲಿ ಸದ್ಯ ಕೊರೋನಾ ರೂಪಾಂತರಿ ಭಯ ಹುಟ್ಟಿಸಿದ್ದು, ಚೀನಾಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಭಯಾನಕ ಸುದ್ದಿಗಳು ಹೊರಬೀಳುತ್ತಿವೆ. ಇನ್ನು ಚೀನಾ ದೇಶದಲ್ಲಿ ಮರಣ ಮೃದಂಗ ಕೆಕೆ ಹಾಕುತ್ತಿದ್ದ, ಅಲ್ಲಿನ ಜನ ಜೀವ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋವಿಡ್ ಸಾವಿನ ಕುರಿತು ಚೀನಾ ಅಧಿಕೃತ ಹೇಳಿಕೆ ಕೊರೋನಾ ಮರಣ ಮೃದಂಗದ ಬಗ್ಗೆ ಚೀನಾ ಸರ್ಕಾರ ಕೊನೆಗೂ ಅಂಕಿ-ಅಂಶ ನೀಡಿದೆ. ಕಳೆದ ವರ್ಷ ಡಿ.8ರಿಂದ ಜ.12ರವರೆಗೆ 60,000 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆಂದು ರಾಷ್ಟ್ರೀಯ ಆರೋಗ್ಯ ಆಯೋಗವು ವರದಿ ಬಿಡುಗಡೆ ಮಾಡಿದೆ. ಕೊರೋನಾ ಸೋಂಕಿತರಲ್ಲಿ ಉಸಿರಾಟದ ತೊಂದರೆಯಾಗಿ 5,503 ಜನರು ಸಾವನ್ನಪ್ಪಿದ್ದರೆ, ಕೊರೋನಾ ಸೇರಿ ಇತರೆ ಆರೋಗ್ಯ ಸಮಸ್ಯೆಗಳಿಂದ 54,435 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಶೇ.90ರಷ್ಟು ಮಂದಿ 65 ವರ್ಷಕ್ಕಿಂತ ಮೇಲ್ಪಟ್ಟವರೇ ಆಗಿದ್ದಾರೆಂದು ಸ್ಪಷ್ಟಪಡಿಸಿದೆ.
![]() |
![]() |
![]() |
![]() |
![]() |
[ays_poll id=3]