This is the title of the web page
This is the title of the web page
Local News

ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಮುಂದುವರೆದ ಪ್ರತಿಭಟನೆ


ರಾಯಚೂರು : ಕೃಷಿ ಅಧಿಕಾರಿ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಲ್ಲಿ ಬಿಟೆಕ್ (ಕೃಷಿ ತಾಂತ್ರಿಕ) ಪದವೀಧರರನ್ನು ಮಾತ್ರ ಪ್ರತ್ಯೇಕ 15 ರಷ್ಟು ಮಾನ್ಯತೆ ನೀಡಬೇಕು, ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆ ಹಾಗೂ ಇನ್ನಿತರ ಬೇಡಿಕೆ ಈಡೇ ರಿಕೆಗೆ ಆಗ್ರಹಿಸಿ ಕೃಷಿ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಕೃಷಿ ವಿಶ್ವವಿದ್ಯಾಲಯದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮೂಲಕ ಆಗಮಿಸಿ ಮನವಿ ಸಲ್ಲಿಸಿದರು. ಕಳೆದ 8 ದಿನಗಳಿಂದ ಆಹೋರಾತ್ರಿ ಹೋರಾಟ ನಡೆಯುತ್ತಿದ್ದು, ಸರ್ಕಾರ ಮಾತ್ರ ವಿದ್ಯಾರ್ಥಿಗಳು ಮನವಿಗೆ ಸ್ಪಂದಿಸುತ್ತಿಲ್ಲ. ಕೃಷಿ ಬಿ ಟೆಕ್ ಪದವಿ 4 ವರ್ಷದ ಕೋರ್ಸ್ ಆಗಿದೆ ಪದವಿ ಮುಗಿದ ವಿದ್ಯಾರ್ಥಿಗಳು ಸರಕಾರದ ಕೃಷಿ ಇಲಾಖೆ ಅಡಿಯಲ್ಲಿ ಬರುವ ಎಒ ಮತ್ತು ಎಎಒ ಹುದ್ದೆಗಳಿಗೆ ಬಿ ಟೆಕ್ ತಾಂತ್ರಿಕ ವಿಭಾಗದ ಪದವೀಧರರಿಗೆ ಈವರೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ 15 ರಷ್ಟು ಮೀಸಲಾತಿ ನೀಡಿದ್ದರು.

ಆದರೆ ಈಗ ಕೇವಲ ಬಿ ಟೆಕ್ ಪದವೀಧರಿಗೆ ವಿದ್ಯಾರ್ಥಿಗಳಿಗೆ ಇದ್ದ ಮೀಸಲಾತಿಯಲ್ಲಿ ಇತರೆ ವಿಭಾಗದ ಬಿಟೆಕ್ ಪದವಿಧರರಿಗೂ ಮೀಸಲಾತಿ ಹಂಚಿಕೆ ಮಾಡಲು ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶವನ್ನು ವಿರೋಧಿಸಲಾಗುವುದು, ಬೇರೆ ರಾಜ್ಯಗಳಲ್ಲಿ ಕೃಷಿ ತಾಂತ್ರಿಕ ನಿರ್ದೇಶನಾಲಯವಿದೆ, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.


[ays_poll id=3]