This is the title of the web page
This is the title of the web page
Health & FitnessState News

ಮತ್ತೆ ಕಲುಷಿತ ನೀರಿನ ಅವಾಂತರ..! DHO ಗ್ರಾಮಕ್ಕೆ ಭೇಟಿ ಪರಿಶೀಲನೆ


ಲಿಂಗಸುಗೂರು : ಯರಗುಂಟಿ ಗ್ರಾಮದ ಜನರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದು ಕೆಲವರು ಲಿಂಗಸುಗೂರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಇನ್ನೂ ಕೆಲವರು ಈಚನಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವಾಂತಿಭೇದಿಯಿಂದ ಜನ ತಲ್ಲಣಗೊಂಡಿದ್ದಾರೆ.

ಈಗಾಗಲೆ ತಾಲೂಕಿನ ಗೊರೆಬಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯರಗುಂಟಿ ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್‌, ತಾಪಂ ಇಒ ಅಮರೇಶ ಯಾದವ್‌ ಭೇಟಿ ನೀಡಿದ್ದು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಆಂಬುಲೆನ್ಸ್‌ ಮೂಲಕ ವಾಂತಿಬೇದಿ ಪೀಡಿತರ ರವಾನಿಸಲು ಜಾಗ್ರತೆ ವಹಿಸಲಾಗಿದ

ತಾಪಂ ಇಒ ಕುಡಿಯುವ ನೀರು ಪೂರೈಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ತೊಂದರೆ ಕಂಡು ಬಂದಿಲ್ಲ ಎನ್ನಲಾಗುತ್ತಿದೆ. ಮದುವೆ ದಿಬ್ಬಣದ ಊಟದಿಂದ ವಾಂತಿಭೇದಿ ಕಂಡು ಬಂದಿರಬಹುದು ಎಂದು ಹೇಳಲಾಗುತ್ತಿದೆ. ಗ್ರಾಮದಲ್ಲಿನ ನೀರು ಕುಡಿಯಲು ಯೋಗ್ಯವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗಳು ಸಮರ್ಪಕವಾಗಿದೆ. ಜನರಲ್ಲಿ ಕಾಣಿಸಿಕೊಂಡಿರುವ ವಾಂತಿಭೇದಿ ಕುರಿತು ಭಯಪಡದಂತೆ ಜನರಿಗೆ ತಿಳುವಳಿಕೆ ನೀಡಲಾಗುತ್ತಿದೆ.


[ays_poll id=3]