
ರಾಯಚೂರು : ಐದು ಎಕರೆ ಭೂಮಿಯಲ್ಲಿ ಒಂದುವರೇ ಎಕರೆಯಲ್ಲಿ 15 ಕೋಟಿ ವೆಚ್ಚದಲ್ಲಿ ಬೃಹತ್ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶೀಘ್ರವಾಗಿ ಭೂಮಿಪೂಜೆ ಮಾಡಲಾಗುವುದು ಎಂದು ನಗರ ಶಾಸಕ ಡಾ. ಶಿವರಾಜ ಪಾಟೀಲ್ ಹೇಳಿದರು.
ಈಗಾಗಲೇ ನಗರದಲ್ಲಿ ಸಿಎ ಮಂಜೂರು ಮಾಡಲಾಗಿದ್ದು, ಆ ಸೈಟಿನಲ್ಲಿ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ 1ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣ ಹಂತದಲ್ಲಿದೆ,ಈಗಾಗಲೇ 75ಲಕ್ಷ ಬಿಡುಗಡೆ ಆಗಿದೆ, ಏಪ್ರಿಲ್ ಅಂತ್ಯದಲ್ಲಿ ಕಟ್ಟಡ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದರು.
ನಿಮ್ಮ ತಂದೆ-ತಾಯಿ ಕಷ್ಟಪಟ್ಟು ದುಡಿದು ನಿಮ್ಮನ ವಿದ್ಯಾವಂತರನ್ನಾಗಿ ಮಾಡಿದ್ದಾರೆ ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿ ಇದೆ ಸಮಾಜವನ್ನು ಮುನ್ನಡಿಸುವಂತಹ ಜವಾಬ್ದಾರಿಯುತ್ತವಾದ ಕಾರ್ಯ ನಿಮ್ಮ ಮೇಲೆ ಇದೆ, ಇನ್ನೂ ಮುಂದಿನ ದಿನಗಳಲ್ಲಿ ಒಳ್ಳೆ ಒಳ್ಳೆ ಉದ್ಯೋಗ ಪಡೆದುಕೊಳ್ಳಿ ನಿರಂತರವಾಗಿ ಅಭ್ಯಾಸದ ಕಡೆಗೆ ಗಮನ ನೀಡಿ ಎಂದು ವಿದ್ಯಾರ್ಥಿಗಳಿಗೆ ಶಾಸಕರಾದ ಡಾ. ಶಿವರಾಜ್ ಪಾಟೀಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರತಿಭೆ ಇದೆ ಅಂತವರನ್ನ ಗುರ್ತಿಸುವುದು, ಅದಕ್ಕಿಂತ ಕಡಿಮೆ ಇದ್ದವರಿಗೆ ಉತ್ತೇಜನ ನೀಡಲು ಪ್ರತಿಭಾ ಪುರಸ್ಕಾರ ಸಮಾರಂಭ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ ಅದೇ ರೀತಿ ಇಂದು ರಾಯಚೂರು ಜಿಲ್ಲೆಯಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವೀರಶೈವ ಲಿಂಗಾಯತ ಸಮಾಜ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಬೇಕು, ಇದರಿಂದ ನೀಟ್ ಪರೀಕ್ಷೆ, ವೈದ್ಯಕೀಯ ವೃತ್ತಿಗೆ ಪ್ರವೇಶ ಪಡೆಯಲು ಅವಕಾಶ ಸಿಗುತ್ತದೆ, ಸಮಾಜದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾದ ಎಚ್.ಎಂ. ರೇಣುಕಾ ಪ್ರಸನ್ನ ಹೇಳಿದರು.
![]() |
![]() |
![]() |
![]() |
![]() |
[ays_poll id=3]