This is the title of the web page
This is the title of the web page
Politics News

ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಬಿಪಿ ಸಿ ಓಟರ್‌ ಸಮೀಕ್ಷೆ


K2 ಪೊಲಿಟಿಕಲ್ ನ್ಯೂಸ್ : 2023 ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಎಬಿಪಿ ಸಿ ಓಟರ್‌ ಸಮೀಕ್ಷೆಯು ತಿಳಿಸಿದೆ.

ರಾಜ್ಯದಲ್ಲಿ ಚುನಾವಣೆ ದಿನಾಂಕ ನೀತಿ ಸಂಹಿತೆ ಘೋಷಣೆಯಾಗಿದೆ. ಈ ಬೆನ್ನೆಲ್ಲೆ ರಾಷ್ಟ್ರೀಯ ಸುದ್ದಿ ವಾಹಿನಿ ಎಬಿಪಿ ನ್ಯೂಸ್‌ ಚುನಾವಣಾ ಫಲಿತಾಂಶದ ಕುರಿತು ತನ್ನ ಸಮೀಕ್ಷೆಯನ್ನು ಬಹಿರಂಗ ಪಡೆದಿದೆ. ಅಭಿಪ್ರಾಯ ಸಂಗ್ರಹ ಮೂಲಕ ಮಾಹಿತಿ ಸಂಗ್ರಹಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಯಾವ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು : ಎಬಿಪಿ-ಸಿ-ವೋಟರ್ ಕರ್ನಾಟಕ ಅಭಿಪ್ರಾಯ ಸಂಗ್ರಹವು ಕಾಂಗ್ರೆಸ್‌ಗೆ 115-127 ಸ್ಥಾನಗಳು, ಬಿಜೆಪಿಗೆ 68-80 ಸ್ಥಾನಗಳು ಮತ್ತು ಜೆಡಿಎಸ್‌ಗೆ 23-35 ಸ್ಥಾನಗಳು ಬರಬಹುದು ಎಂದು ಹೇಳಿದೆ.

ಮಧ್ಯ ಕರ್ನಾಟಕ & ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸುದ್ದಿ ಸಂಸ್ಥೆಯೊಂದು ನಡೆಸಿದ ಸಿ-ವೋಟರ್ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಮಧ್ಯ ಕರ್ನಾಟಕದ 35 ಸ್ಥಾನಗಳಲ್ಲಿ ಕಾಂಗ್ರೆಸ್ 18-22, ಬಿಜೆಪಿಗೆ 13-17 ಸೀಟು ಗೆಲ್ಲುವ ಸಾಧ್ಯತೆ ಇದೆ. ಜೆಡಿಎಸ್ & ಇತರರು ತಲಾ 1 ಸ್ಥಾನ ಗೆಲ್ಲಲಿದ್ದಾರೆ ಎಂದಿದೆ. ಇನ್ನು, ಕಿತ್ತೂರು ಕರ್ನಾಟಕದ 50 ಕ್ಷೇತ್ರಗಳಲ್ಲಿ ಬಿಜೆಪಿ 21-25, ಕಾಂಗ್ರೆಸ್ 25-29, ಜೆಡಿಎಸ್ 1, ಇತರೆ 1 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎಂದಿದೆ.


[ays_poll id=3]