This is the title of the web page
This is the title of the web page
Local News

ಕಾಂಗ್ರೆಸ್ ಪಕ್ಷ 2023 ಚುನಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು


ರಾಯಚೂರು : 2023 ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಹನುಮಂತ ನಾಯಕ ಸಿಂಗನೋಡಿ ಆಗ್ರಹಿಸಿದರು.

ರಾಯಚೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ವಿಷಯದಲ್ಲಿ ಜನಗಳಿಗೆ ತುಂಬಾ ಅಸ್ತವಸ್ತ್ರವಾಗಿದೆ. ಸರಿಯಾದ ಆಸ್ಪತ್ರೆ ಮತ್ತು ವೈದ್ಯರೂ ಇಲ್ಲ.ವೈದ್ಯರು ಇದ್ದರೆ ಔಷಧಿ ಇರುವುದಿಲ್ಲ. ಈ ಬಡ ಜನತೆಗೆ ಗ್ರಾಮಾಂತರ ಪ್ರದೇಶದಲ್ಲಿ ಅವರ ಪಾಡು ನೋಡುವವರು ಮತ್ತು ಕೇಳುವವರು ಇಲ್ಲ. ಸೋತ ಬಿ.ಜೆ.ಪಿ ಅಭ್ಯರ್ಥಿ ತಿಪ್ಪರಾಜು ರವರು ಸಿಂಗನೋಡಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಕರುಣಾರ್ಥದಲ್ಲಿ ನವೋದಯ ರವರು ಆಸ್ಪತ್ರೆ ಕಟ್ಟಿದ್ದಾರೆ. ಅದರ ಪಕ್ಕದಲ್ಲಿ ರೈತರ ಭೂಮಿಯನ್ನು ಖರೀದಿಸಿ, ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಿದ್ದಾರೆ.

ಇದರಿಂದ ಯುವ ಜನತೆಗೆ ಮತ್ತು ರೈತರಿಗೆ ಕುಡಿತದ ದುಷ್ಟಟಕ್ಕೆ ಬಿದ್ದು ಅವರ ಕೆಲಸ ಕಾರ್ಯಗಳನ್ನು ಬಿಟ್ಟು ಬೀದಿಗೆ ಬಿದ್ದಿದ್ದಾರೆ ಎಂದು ಆರೋಪಿಸಿದರು. ವಲಸೆ ಬಂದ ನಾಯಕರಿಗೆ ಪಕ್ಷದ ಟಿಕೇಟ್ ನೀಡದಿರಲು ಈ ಗ್ರಾಮೀಣ ಕ್ಷೇತ್ರದ ಟಿಕೆಟ್ ವಲಸೆ ಬಂದವರಿಗೆ ನೀಡಿದರೆ ಈ ಕ್ಷೇತ್ರದ ಜನ ವಲಸೆ ಹೋಗುತ್ತಾರೆ. ಸುಪ್ರಿಂ ಕೋರ್ಟ್ ವಕೀಲರು ದೇವಣ್ಣ ನಾಯಕ ಇವರ ಮಗನಾದ ಕೆ ಚಂದ್ರಶೇಖರ ನಾಯಕ ಸ್ಥಳೀಯರಿದ್ದು ನೆಲೆ ಜಲ ಹಾಗೂ ಭೂಮಿಯ ಪರಿಸ್ಥಿತಿ , ರೈತಾಪಿ ಜನರಗೋಳು ಇಲ್ಲಿನ ಬೆಳೆ ಬಗ್ಗೆ ಅವಗಹನೆ ಹೊಂದಿದ್ದಾರೆ. ಆದರಿಂದ ಅವರಿಗೆ ಮುಂಬರುವ ಗ್ರಾಮೀಣ ಕ್ಷೇತ್ರ ಟಿಕೆಟ್ ನೀಡಲು ಒತ್ತಾಯಿಸಿದರು.


[ays_poll id=3]