K2kannadanews.in
Political News ರಾಯಚೂರು : ಕೃಷಿ ಮೇಳೆ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆ ಮೇಲೆ ಹೆಸರು ಕರೆಯದಿದ್ದಕ್ಕೆ ಕಾಂಗ್ರೆಸ್ ಶಾಸಕ ಕೆಂಡಾಮಂಡಲವಾಗಿ ಸಚಿವರುಗಳ ಮುಂದೆಯೇ ಕುಲಪತಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹೌದು ರಾಯಚೂರು ನಗರದ ಕೃಷಿ ವಿವಿಯಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳದ ಉದ್ಘಾಟನೆ ಸಮಾರಂಬದಲ್ಲಿ, ವೇದಿಕೆ ಮೇಲೆ ಕುಲಪತಿ ಡಾ.ಎಂ.ಹನುಮಂತಪ್ಪ ಅವರು ಸ್ವಾಗತ ಭಾಷಣ ಮಾಡುತ್ತಿದ್ದರು. ಈ ವೇಳೆ ಎಲ್ಲರನ್ನು ಸ್ವಾಗತಿಸಿ, ಶಾಸಕರ ಹೆಸರು ಬಿಟ್ಟ ಕುಲಪತಿಗಳು, ಶಾಸಕರಿಗೆ ಸರಿಯಾದ ಗೌರವ ಕೊಡಲು ಬರುವುದಿಲ್ಲ ಎಂದು ಗರಂ ಆಗಿ, ವಿರುದ್ಧ ಆಕ್ರೋಶಗೊಂಡ ಶಾಸಕರು ಸಚಿವರ ಮುಂದೆ ತರಾಟೆಗೆ ತೆಗೆದುಕೊಂಡರು. ಬಳಿಕ ವಿವಿ ಕುಲಪತಿ ಶಾಸಕರನ್ನು ಕ್ಷಮೆ ಕೇಳಿ ಮತ್ತೊಮ್ಮೆ ಸ್ವಾಗತ ಕೋರಿದ ಘಟನೆ ಜರುಗಿತು. ವೇದಿಕೆ ಮೇಲೆ ಉಪಸ್ಥಿತಿ ಇದ್ದ ಕೃಷಿ ಸಚಿವ ಚೆಲುವರಾಯಸ್ವಾಮಿ, ಶರಣಪ್ರಕಾಶ್ ಪಾಟೀಲ್, ಎನ್ ಎಸ್ ಬೋಸರಾಜು ಹಾಗೂ ಶಾಸಕರು ನಾಯಕರು ಉಪಸ್ಥಿತರಿದ್ದರು.