ಕಾಂಗ್ರೆಸ್ ಸಿಂಗಲ್ ದರಿದ್ರ, ಬಿಜೆಪಿ ಡಬಲ್ ದರಿದ್ರ
![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ಕರ್ನಾಟಕದಲ್ಲಿ ಚುನಾವಣೆಗಳು ಎದುರಾಗುತ್ತಿವೆ ಈ ಹಿನ್ನೆಲೆಯಲ್ಲಿ ಪಕ್ಷಗಳು ಪರಸ್ಪರ ಕೆಸರ ಚಟ ಮಾಡುವುದು ಸಹಜ. ಇನ್ನೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರಕ್ಕೆ ಬಂದರೆ ದರಿದ್ರ ಎಂದು ಎರಡು ಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಹೌದು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದರಿದ್ರ, ಬಿಜೆಪಿ ಇದ್ದರೆ ಡಬಲ್ ದರಿದ್ರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಕ್ಕೆ ಮೋದಿ, ಜೆ.ಪಿ.ನಡ್ಡಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೀಗೆ ಹಲವರು ಬಂದು ಹೋಗುತ್ತಿದ್ದಾರೆ. ಅವರು ಬಂದು-ಹೋಗುವವರು, ಆದರೆ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ & ನಾನು ಇಲ್ಲೇ ಇರುವವರು. ನಮಗೆ ಯಾವ ವರಿಷ್ಠರೂ ಇಲ್ಲ. ನಾವು ಇಲ್ಲಿಯೇ ಇರಲಿದ್ದು, ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತೇವೆ ಎಂದು ಹೇಳಿದರು.
![]() |
![]() |
![]() |
![]() |
![]() |