
K2 ಪೊಲಿಟಿಕಲ್ ನ್ಯೂಸ್ : ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ 7 ಕೋಟಿ ರೂಪಾಯಿ ಅನುದಾನ ನೀಡುವಂತೆ ಸಿದ್ದರಾಮಯ್ಯರನ್ನು ಕೇಳಿದರೂ ನೀಡಲಿಲ್ಲ. ಅಲ್ಲದೆ ಎನ್.ಆರ್.ಸಿ, ಹಿಜಾಬ್ ವಿಷಯಗಳಲ್ಲಿ ಬಾಯಿ ತೆರೆಯದೆ ಈಗ ಚುನಾವಣೆ ಹತ್ತಿರ ಆಗುತ್ತಿದ್ದಂತೆ ಮುಸ್ಲೀಮರ ಬಗ್ಗೆ ಕೃತಕ ಪ್ರೀತಿ ತೋರುತ್ತಿರುವ ಕಾಂಗ್ರೆಸ್‌ನವರನ್ನು ನಂಬಬೇಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಮುಸ್ಲಿಮರ ಬಗ್ಗೆ ಕಾಂಗ್ರೆಸ್ ಕೃತಕ ಪ್ರೀತಿ ತೋರುತ್ತಿದ್ದು, ಅದನ್ನು ನಂಬಬೇಡಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪುಸುಲ್ತಾನ್ ಯೂನಿವರ್ಸಿಟಿ ಮಾಡುವಂತೆ ವಿನಂತಿ ಮಾಡಿದ್ದೆ. ಆದರೆ ಮಾಡಲಿಲ್ಲ. ಜೆಡಿಎಸ್ ಅಲ್ಪಸಂಖ್ಯಾತರನ್ನು ಗುರುತಿಸಿ ಅನೇಕ ಉನ್ನತ ಸ್ಥಾನಗಳನ್ನು ನೀಡಿದೆ. ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದ ತಕ್ಷಣ ಕೋಲಾರದಲ್ಲಿ ಟಿಪ್ಪುಸುಲ್ತಾನ್ ಯೂನಿವರ್ಸಿಟಿ ಮಾಡಲಾಗುವುದು ಎಂದಿದ್ದಾರೆ.
![]() |
![]() |
![]() |
![]() |
![]() |
[ays_poll id=3]