
ರಾಯಚೂರು : ಕಾಂಗ್ರೆಸ್ ಪಕ್ಷ 2023ರ ವಿಧಾನಸಭಾ ಚುನಾವಣೆಗೆ ಅಂತಿಮ ಆರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಈ ಒಂದು ಪಟ್ಟಿಯಲ್ಲಿ ಕುತೂಹಲ ಕೆರಳಿಸಿದ್ದ ರಾಯಚೂರು ನಗರ ಕ್ಷೇತ್ರಕ್ಕೆ ಮಹಮ್ಮದ್ ಶಾಲಾಮ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಟಿಕೆಟ್ ಪಡೆಯಲು ತೀವ್ರ ಪೈಪೋಟಿ ನಡೆಸಿದ ಎನ್ ಎಸ್ ಬೋಸರಾಜ್, ಸಯ್ಯದ್ ಯಾಸಿನ್ ಇಬ್ಬರಿಗೂ ಕೂಡ ಟಿಕೆಟ್ ಕೈತಪ್ಪಿದ್ದು, ಅಂತಿಮವಾಗಿ ಮಹಮ್ಮದ್ ಶಾಲಾಮ್ ಅವರಿಗೆ ಕಾಂಗ್ರೆಸ್ ಮಣೆಹಾಕಿದೆ. ರಾಯಚೂರು ನಗರ ಕ್ಷೇತ್ರಕ್ಕೆ ಎಲ್ಲೋ ಒಂದು ಕಡೆ ಹೊಸ ಮುಖ ಹಾಕಿರುವುದರಿಂದ, ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರಿಗೆ ಕಾಂಗ್ರೆಸ್ ಪರೋಕ್ಷವಾಗಿ ಸಹಕರಿಸಿದಂತಾಗಿದೆ.
ಬಿಜೆಪಿ ಅಭ್ಯರ್ಥಿಗೆ ಎಲ್ಲೋ ಒಂದು ಕಡೆ ಎನ್ ಎಸ್ ಬೋಸರಾಜ್ ಅವರು ಪೈಪೋಟಿ ನೀಡುವ ಅಭ್ಯರ್ಥಿ ಎಂದು ಕ್ಷೇತ್ರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ನಗರ ಕ್ಷೇತ್ರದಲ್ಲಿ ಎನ್ ಎಸ್ ಬೋಸ್ ರಾಜ್ ಹೊರತುಪಡಿಸಿ ಇನ್ಯಾವುದೇ ಅಭ್ಯರ್ಥಿ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದ್ದವು. ಆದರೆ ಇದೀಗ ಮಹಮ್ಮದ್ ಶಾಲಾಮ್ ಅವರಿಗೆ ಟಿಕೆಟ್ ನೀಡಿರುವುದು ಬಿಜೆಪಿ ಅಭ್ಯರ್ಥಿ ಹಾದಿ ಸುಗಮ ಮಾಡಿಕೊಟ್ಟಂತಾಗಿದೆ.
![]() |
![]() |
![]() |
![]() |
![]() |
[ays_poll id=3]