This is the title of the web page
This is the title of the web page
Politics News

ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನಗಳಲ್ಲಿ ಗೆಲ್ಲುತ್ತೇವೆ


K2 ಪೊಲಿಟಿಕಲ್ ನ್ಯೂಸ್ : ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ, ರಾಯಚೂರು ನಗರ ಕ್ಷೇತ್ರದಲ್ಲಿ ಜನರ ಆಶೀರ್ವಾದ ದಿಂದ ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ್ ಶಾಲಂ ಅವರು ಶಾಸಕರಾಗುದು ಖಚಿತ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಹೇಳಿದರು .

ನಗರ ಶಾಸಕರ 40% ಭ್ರಷ್ಟಾಚಾರಕ್ಕೆ ಜನರು ಬೇಸತ್ತಿದ್ದಾರೆ ಈ ಬಾರಿ ಜನರು ಬದಲಾವಣೆ ಬಯಸಿ ರಾಯಚೂರು ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಕೈ ಹಿಡಿದು ಆಶೀರ್ವಾದ ಮಾಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಡಾವಣೆಯ ಜನರು ಮಾತನಾಡಿ ನಮಗೆ ಕುಡಿಯಲು ಸರಿಯಾದ ನೀರಿಲ್ಲ, ರಸ್ತೆ ಇಲ್ಲ, ಚರಂಡಿ ಇಲ್ಲ, ರಾಯಚೂರಿನಲ್ಲಿಯೇ ವಿದ್ಯುತ್ ಉತ್ಪಾದನೇಯಾದರು ನಮಗೆ 24×7 ಬೆಳಕು ನೀಡುತ್ತಿಲ್ಲ ಎಂದು ಅಳಲನ್ನು ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿದರು. ನಿಮ್ಮೆಲ್ಲರ ಸಮಸ್ಯೆಗಳ ಶಾಸ್ವತ ಪರಿಹಾರದ ಕಾಲ ಬಂದಿದೆ ಸುಳ್ಳು ಮಾತಿಗೆ ಮರಳಾಗದೆ ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ್ ಶಾಲಂ ಅವರಿಗೆ ಬೆಂಬಲಿಸಿ ಎಂದು ಮನವಿ ಮಾಡಿದರು ಮತಯಾಚಿಸಿದರು.


[ays_poll id=3]