This is the title of the web page
This is the title of the web page
Local News

ಏಕಾಗ್ರತೆ, ಧ್ಯಾನ ಕೃತಿ ಲೋಕಾರ್ಪಣೆ


ರಾಯಚೂರು : ಇಂದಿನ ಯುವಕರು ಮೊಬೈಲ್ ಗೀಳಿನಲ್ಲಿ ಮುಳುಗಿದ್ದು ಏಕಾಗ್ರತೆ ಕಳೆದುಕೊಂಡಿದ್ದಾರೆ. ಮೊಬೈಲ್ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲವನ್ನೂ ಒಳಗೊಂಡಿದೆ ಇದನ್ನು ಯುವಕರು ಅರ್ಥಮಾಡಿಕೊಳ್ಳದಿರುವುದು ದುರಂತ ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ ಕಿವಿಮಾತು ಹೇಳಿದರು.

ಜೆ.ಎಂ ಶರಣಯ್ಯ ಸ್ವಾಮಿ ಅವರ ‘ಅಧ್ಯಯನದಲ್ಲಿ ಏಕಾಗ್ರತೆ ಮತ್ತು ಧ್ಯಾನ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅಧ್ಯಯನ, ಏಕಾಗ್ರತೆ ಹಾಗೂ ಧ್ಯಾನದಿಂದ ಜಗತ್ತು ಗೆಲ್ಲಬಹುದು. ಇಂದಿನ ಯುವಕರು ಇದನ್ನು ಅರಿತು ಈ ಗುಣಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಬೇಕು. ವಿದ್ಯಾರ್ಥಿಗಳು ಓದುವ ಬಗೆಯನ್ನು ತಿಳಿಸಲು ಶರಣಯ್ಯವರ ಈ ಕೃತಿ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಈ ಪುಸ್ತಕ ಖರೀದಿಸಿ ಓದಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಪ್ರತಿಯೊಬ್ಬರಿಗೆ ಆಧ್ಯಾತ್ಮಿಕ ಶಿಕ್ಷಣ, ಏಕಾಗ್ರತೆ ಅವಶ್ಯವಾಗಿದೆ. ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿದೆ. ಅನೈತಿಕತೆ, ಆಶಾಭಾವ, ಮತ್ಸರ ಹಾಗೂ ನಕರಾತ್ಮಕ ಗುಣಗಳು ವಿಜೃಂಬಿಸುತ್ತಿದೆ. ಯಾವುದೇ ಹುದ್ದೆ ಅಲಂಕರಿಸಿ ದೊಡ್ಡ ಸ್ಥಾನದಲ್ಲಿದ್ದರೂ ಮಾನವೀಯ ಮೌಲ್ಯ, ಗುಣಗಳಿಲ್ಲದಿದ್ದರೆ ವ್ಯರ್ಥ. ಮಾನವರಾಗಿ ಬದುಕಬೇಕು ಎಂದು ಹೇಳಿದರು.


[ays_poll id=3]