This is the title of the web page
This is the title of the web page
Local News

ದೌರ್ಜನ್ಯಕ್ಕೆ ಒಳಗಾಗಿದ್ದ ಕುಟುಂಬಕ್ಕೆ ಪರಿಹಾರ ಮತ್ತು ಸರಕಾರಿ ನೌಕರಿ..


ರಾಯಚೂರು : ತನ್ನದಲ್ಲದ ತಪ್ಪಿಗೆ ಕೊಲೆಯಾಗಿದ್ದ ವ್ಯಕ್ತಿಯ ಕುಟುಂಬಕ್ಕೆ 8 ಲಕ್ಷ ರೂ ನಗದು ಪರಿಹಾರವನ್ನು ಅಮರೇಶನ ತಾಯಿಗೆ ಮತ್ತು ಸರಕಾರಿ ಉದ್ಯೋಗದ ಆದೇಶವನ್ನು ಅಮರೇಶನ ಪತ್ನಿ ಲಕ್ಷ್ಮೀ ಗೆ ಕೊಡಿಸಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ತಿಳಿಸಿದ್ದಾರೆ.‌

ಮಾನವಿ ತಾಲೂಕಿನ ಗವಿಗಟ್ ಗ್ರಾಮದಲ್ಲಿ ಅಮರೇಶ ಎಂಬ ಯುವಕನ ಕೊಲೆ ಆಗಿತ್ತು. ಹದಿನೈದು ಜನರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆಯಾದ ಅಮರೇಶನಿಗೆ ಮದುವೆಯಾಗಿ ಕೇವಲ ಆರು ತಿಂಗಳು ಆಗಿತ್ತು. ಒಕ್ಕಲುತನ ಮಾಡಿಕೊಂಡಿದ್ದ ಅಮರೇಶ ತನ್ನದಲ್ಲದ ತಪ್ಪಿಗೆ ಕೊಲೆಯಾಗಿ ಹೋಗಿದ್ದ. ಅಮರೇಶನ ತಾಯಿ ಮತ್ತು ಪತ್ನಿಗೆ ಜೀವವೇ ಹೋದಂತಾಗಿ ಕಂಗಾಲಾಗಿ ಹೋಗಿದ್ದರು. ಕೊಲೆಯಾದ ಅಮರೇಶನಿಗೆ ಸಂಬಂಧಿಸಿದ ಎಫ್ ಐ ಆರ್ ಸೇರಿದಂತೆ ಪ್ರತಿಯೊಂದು ದಾಖಲೆ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ನೆರವು ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. 8 ಲಕ್ಷ ರೂ ನಗದು ಪರಿಹಾರವನ್ನು ಅಮರೇಶನ ತಾಯಿಗೆ ಮತ್ತು ಸರಕಾರಿ ಉದ್ಯೋಗದ ಆದೇಶವನ್ನು ಅಮರೇಶನ ಪತ್ನಿ ಲಕ್ಷ್ಮೀ ಗೆ ಕೊಡಿಸಲಾಗಿದೆ.

ಅಮರೇಶ ಕುಟುಂಬವನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರಿಂದ ನೇಮಕಾತಿ ಆದೇಶ ಪತ್ರವನ್ನು ಕೊಡಿಸಲಾಗಿದೆ. ಪಶುಪಾಲನಾ ಇಲಾಖೆಯಲ್ಲಿ ಗ್ರೂಪ್ ಡಿ ಹುದ್ದೆಗೆ ಅಮರೇಶನ ಪತ್ನಿ ಲಕ್ಷ್ಮೀ ಅವರ ನೇಮಕ ಮಾಡಿರುವ ಆದೇಶವನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಇಂತಹ ಪ್ರಕರಣದಲ್ಲಿ ಸರಕಾರಿ ನೌಕರಿ ದೊರೆಯಲು ಹಲವು ವರ್ಷಗಳೇ ಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಒಂದೇ ವರ್ಷದಲ್ಲಿ ಆದೇಶ ಮಾಡಲು ಜಿಲ್ಲಾಧಿಕಾರಿಗಳು ಕಾರಣರಾಗಿದ್ದಾರೆ. ಆದೇಶ ಮಾಡಿದ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರಿಗೂ ಹಾಗೂ ನೊಂದ ಕುಟುಂಬದ ನೆರವಿಗೆ ನಿಂತ ರಘುವೀರ ನಾಯಕ ಅವರಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.


[ays_poll id=3]