
ರಾಯಚೂರು : ವಿದ್ಯುತ್ ಶಾಕೋತ್ಪನ್ನ ಕೇಂದ್ರದಲ್ಲಿ ಕಲ್ಲಿದ್ದಲು ರೆಕನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ, ರೈಲು ಅಪಘಾತ ಸಂಭವಿಸಿ ಸಾವಿಗೀಡಾದ ಘಟನೆ ನಡೆದಿದೆ.
ರಾಯಚೂರು ತಾಲೂಕಿನ ಶಕ್ತಿನಗರದ ಆರ್‌ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಘಟನೆ ನಡೆದಿದೆ. ನಾಗರಾಜ್ (32) ಮೃತ ಗುತ್ತಿಗೆ ಕಾರ್ಮಿಕ. ಕಲ್ಲಿದ್ದಲು ಸಾಗಿಸುವ ರೈಲಿನ ರೇಕ್ ಹರಿದು ಗುತ್ತಿಗೆ ಕಾರ್ಮಿಕನಾಗಿ ಮೃತಪಟ್ಟಿದ್ದಾನೆ. ಅಪಘಾತ ಸಂಭವಿಸಿದಾಗ ಕಾರ್ಮಿಕ ಕಲ್ಲಿದ್ದಲು ಸ್ಯಾಂಪಲ್ ತೆಗೆಯುವ ಕೆಲಸದಲ್ಲಿ ತೊಡಗಿದ್ದರು.
ಕೆಲಸದ ವೇಳೆ ರೈಲಿನಡಿಗೆ ಆಕಸ್ಮಿಕವಾಗಿ ಬಿದ್ದಿರುವ ಶಂಕೆಯಿದೆ. ರೈಲು ಕುತ್ತಿಗೆ ಮೇಲೆ ಹರಿದದ್ದರಿಂದ ರುಂಡ ಮುಂಡ ಬೇರ್ಪಟ್ಟಿದೆ. ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
![]() |
![]() |
![]() |
![]() |
![]() |
[ays_poll id=3]